24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಚಾರು: ಬದನಾಜೆ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಪುನಾರಚನೆ

ಮಾಚಾರು: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಯ ಹಿರಿಯ ವಿದ್ಯಾರ್ಥಿ ಸಂಘವನ್ನು ಮಾರ್ಚ್ 3 ರಂದು ನಡೆದ ಶಾಲೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಪುನಾರಚನೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ರಾಮಯ್ಯ ಗೌಡ ಮಾಚಾರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸುರೇಶ್ ಮಾಚಾರ್, ಕೋಶಾಧಿಕಾರಿಯಾಗಿ ರೋಶನ್ ಡಿಸೋಜ, ಉಪಾಧ್ಯಕ್ಷರಾಗಿ ಶ್ರೀಮತಿ ನಾಗವೇಣಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ಚಂದ್ರ ನಾಯ್ಕ ಆಯ್ಕೆಯಾದರು.

ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಶಿಕ್ಷಕರಾದ ಬಾಬುಗೌಡ ಬಾಜಿಮಾರು ರವರನ್ನು ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷರಾದ ಮೋಹನ್ ಪಿ, ಕಾರ್ಯದರ್ಶಿಯಾದ ಗೋಪಾಲ್ ಮಾಸ್ಟರ್, ಎಚ್.ಬಿ.ಮೋಹನ್,ಬಿ.ಎಂ.ಇಲ್ಯಾಸ್,ಗುರುಪ್ರಸಾದ್ ಕೋಟ್ಯಾನ್,ಅನಿಲ್ ಡಿಸೋಜ,ಪಿತಾಂಬರ ಪೂಜಾರಿ,ಸುಂದರ ಬಂಗೇರ, ಸೋಮಶೇಖರ್ ಕೆ,ಮುರಳೀಧರ ಆಚಾರ್ಯ,ಸಂತೋಷ್ ಗೌಡ ಬದನಾಜೆ, ದೇವದಾಸ್ ಮುರ,ಹರಿಪ್ರಸಾದ್ ಪಾಲೆಂಜ,ಕೇಶವ ನಾಯ್ಕ,ಪ್ರಕಾಶ್ ಗೌಡ ಓರಾಲು,ಸುರೇಶ್ ಮಡಿವಾಳ್, ರಮೇಶ್ ಬೊಳ್ಳಿ, ಹಂಝ ಬಂಡಸಾಲೆ,ಸಂಜೀವ ನಾಯ್ಕ ಕಲ್ಲಾಜೆ, ಮಹಮ್ಮದ್ ಇಕ್ಬಾಲ್ ಮಾಚಾರ್, ಪುರುಷೋತ್ತಮ ಬಿ.ಎಸ್, ರಮೇಶ್ ನಾಯ್ಕ ಮಾಪಲ,ಕರುಣಾಕರ ಗೌಡ,ಮಂಜುಳ ಹಾಗೂ ಸ್ವಪ್ನ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲಲಿತ, ಸಹ ಶಿಕ್ಷಕಿ ಮಮತ ಹಾಗೂ ಬದನಾಜೆ ಪ್ರೌಢಶಾಲಾ ಶಿಕ್ಷಕರಾದ ಮಹದೇವ ಶೆಟ್ಟಿಯವರು ಉಪಸ್ಥಿತರಿದ್ದರು.

Related posts

ಟೀಂ ಅಭಯಹಸ್ತ ವತಿಯಿಂದ ಸುಲ್ಕೇರಿಮೊಗ್ರು ಸರ್ಕಾರಿ ಶಾಲೆಗೆ ಆರ್ಥಿಕ ಸಹಕಾರದ ಹಸ್ತಾಂತರ-ಬಹುಮಾನ ವಿತರಣೆ

Suddi Udaya

ಹಿರಿಯ ಪತ್ರಕರ್ತ ಪ್ರೊ. ನಾ ’ವುಜಿರೆ’ಯವರಿಗೆ ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ನುಡಿ ನಮನ

Suddi Udaya

ಕಲ್ಲುಂಜ ಪ್ರಗತಿಪರ ಕೃಷಿಕ, ನಾಟಿ ವೈದ್ಯ ಅಣ್ಣಿ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರೀದಮಿಕ್ ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮುಂಡಾಜೆಯ ತೇಜಲ್ ಕೆ. ಆರ್ ರವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya

ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya
error: Content is protected !!