September 6, 2026
Uncategorizedಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

ಬೆಳ್ತಂಗಡಿ: ಶಾಲಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶಾಲೆಯ ಕಪಾಟಿ ನಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿದ ಘಟನೆ ಇಳಂತಿಲದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲಾ ಮುಖ್ಯೋಪಾಧ್ಯಾಯಿನಿ ಗುರುವಾರ ಬೆಳಿಗ್ಗೆ ಶಾಲೆಗೆ ಬಂದು ನೋಡಿದಾಗ ಶಾಲೆಯ ಕಛೇರಿ ಕೊಠಡಿಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿರುವುದು ಕಂಡು ಬಂದಿದೆ. ಒಳಗೆ ನೋಡಿದಾಗ ಕಪಾಟಿನ ಬೀಗ ಒಡೆದಿದ್ದು ಅದರಲ್ಲಿ ಇರಿಸಲಾಗಿದ್ದ ರೂ 1,500 ಹಣವನ್ನು ಕಳವು ಮಾಡಿರುವುದು ಕಂಡು ಬಂದಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಬಬ್ ನಿಂದ ಆಟೋಟ ಸ್ಪರ್ದೆ, ಸಾಧಕರಿಗೆ ಸನ್ಮಾನ, ನೂತನ ಮನೆಗೆ ಚಾಲನೆ

Suddi Udaya

ಮೇಲಂತಬೆಟ್ಟು: ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

Suddi Udaya

ಉರುವಾಲು: ಕುಪ್ಪೆಟ್ಟಿ ರಸ್ತೆಯಲ್ಲಿ ಬೃಹತ್ ಹೊಂಡ: ಸ್ಥಳೀಯರಿಂದ ರಸ್ತೆಯ ಮಧ್ಯೆ ಕೆಂಪು ವಸ್ತ್ರವಿಟ್ಟು ಎಚ್ಚರಿಕೆಯ ಸೂಚನೆ

Suddi Udaya

ಮಾ.2: ಬೆಳ್ತಂಗಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ – ದಂತ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಸೇವಾಭಾರತಿ ಆಶ್ರಯದಲ್ಲಿ 100ನೇ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!