25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಯನ್ಸ್ ಕ್ಲಬ್ ನಲ್ಲಿ “ಕ್ಲಬ್ ಕ್ವಾಲಿಟಿ ಇನೀಶಿಯೇಟಿವ್” ಕಾರ್ಯಾಗಾರ

ಬೆಳ್ತಂಗಡಿ; ಎರಡನೇ ಮಹಾಯುದ್ಧದ ಸಂದರ್ಭ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ 1917 ರಲ್ಲಿ ಆರಂಭಗೊಂಡ ಲಯನ್ಸ್ ಸಂಸ್ಥೆ ಇಂದು 50 ಸಾವಿರ ಕ್ಲಬ್ ಗಳಾಗಿ, 200 ದೇಶಗಳಲ್ಲಿ 14 ಲಕ್ಷ‌ ಸದಸ್ಯರನ್ನೊಳಗೊಂಡು ವಿಶದವ ವ್ಯಾಪಿಯಾಗಿದೆ. ಪರಸ್ಪರ ಎಲ್ಲರೂ ಜೊತೆಯಾಗಿ ಸೇವೆ ಮಾಡುವುದು ಮಾತ್ರವಲ್ಲದೆ ಸಾಂಗತ್ಯ ಬೆಳೆಸಿಕೊಳ್ಳುವುದೇ ಇದರ ಮೂಲ ಗುರಿ ಎಂದು ಲಯನ್ಸ್ ಜಿಲ್ಲಾ ಸಿಕ್ಯೂಐ ಸಂಯೋಜಕ ಪ್ರಶಾಂತ್ ಶೆಟ್ಟಿ ಹೇಳಿದರು.


ಬೆಳ್ತಂಗಡಿ ಲಯನ್ಸ್ ಕ್ಲಬ್ ನಲ್ಲಿ ನಡೆದ ಕ್ಲಬ್ ಕ್ವಾಲಿಟಿ ಇನೀಶಿಯೇಟಿವ್ ಸೆಮಿನಾರ್ ನಲ್ಲಿ ಅವರು ಸಂಪನ್ಮೂಲ ಉಪನ್ಯಾಸ ನೀಡುತ್ತಿದ್ದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ವಹಿಸಿದ್ದರು.
ವಿಶೇಷ ಅತಿಥಿಯಾಗಿ ಜಿಲ್ಲಾ ಮಾಜಿ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಭಾಗಿಯಾಗಿದ್ದರು. ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ತಾಲೂಕು ಕೋಶಾಧಿಕಾರಿ ಸುಭಾಷಿಣಿ, ನಿಕಟಪೂರ್ವ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.


ದತ್ತಾತ್ರೇಯ ಗೊಲ್ಲ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಂಡಿಸಿದರು. ರವೀಂದ್ರ ಶೆಟ್ಟಿ ಬಳೆಂಜ ಪ್ರಾರ್ಥಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಧ್ವಜವಂದನೆ‌ ಹಾಗೂ ಬಿ.ಪಿ ಅಶೋಕ್ ನೀತಿ ಸಂಹಿತೆ ವಾಚಿಸಿದರು. ಕೆ‌ ಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ ಧನ್ಯವಾದವಿತ್ತರು.

Related posts

ಪಿಡಬ್ಲ್ಯೂ ಪ್ರಥಮ ದರ್ಜೆ ಸಹಾಯಕ ಹರೀಶ್ ಶೆಟ್ಟಿ- ಶ್ರೀಮತಿ ಚಂಪಾ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಡಾ. ರವಿ ಮಂಡ್ಯ ಆಯ್ಕೆ

Suddi Udaya

ನಡ: ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಶಿರ್ಲಾಲಿನ ಶಾಲ್ವಿ ಜೈನ್

Suddi Udaya

ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಿಸರ್ಗದ ಮಡಿಲಲ್ಲಿ ಪರಿಸರ ಪಾಠ

Suddi Udaya

ಎಸ್.ಡಿ.ಎಮ್ ಮಹಿಳಾ ಐ.ಟಿ.ಐ ಯಲ್ಲಿ ಎನ್.ಸಿ.ವಿ.ಟಿ ಮಾನ್ಯತೆ ಪಡೆದ ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ ವೃತ್ತಿ ಆರಂಭ

Suddi Udaya
error: Content is protected !!