ಬೆಳ್ತಂಗಡಿ ತಾಲೂಕಿನ ಪಂಚ ಗ್ಯಾರಂಟಿ ಸಮಾವೇಶ

Suddi Udaya

ಬೆಳ್ತಂಗಡಿ : ಕರ್ನಾಟಕ ಸರಕಾರ ದ.ಕ ಜಿಲ್ಲಾ ಆಡಳಿತ, ತಾಲೂಕು ಆಡಳಿತ ಇದರ ವತಿಯಿಂದ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಉಚಿತ ಪ್ರಯಾಣ, ಇದರ ಬೆಳ್ತಂಗಡಿ ತಾಲೂಕಿನ ಫಲಾನುಭವಿಗಳ ಸಮಾವೇಶ ಮಾ.9ರಂದು ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಜರುಗಿತು.

ಸಮಾವೇಶವನ್ನು ವಿಧಾನ ಪರಿಷತ್ ಶಾಸಕರುಗಳಾದ ಹರೀಶ್ ಕುಮಾರ್ ಹಾಗೂ ಮಂಜುನಾಥ ಭಂಡಾರಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್‍ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಭಾಗವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಿಡಿಪಿಒ ಪ್ರಿಯಾ ಆಗ್ನೇಶ್ , ಅನ್ನ ಭಾಗ್ಯ ಯೋಜನೆ ಬಗ್ಗೆ ಆಹಾರ ನಿರೀಕ್ಷಕ ವಿಶ್ವ ಕೆ, ಯುವನಿಧಿ ಬಗ್ಗೆ ಪ್ರದೀಪ್ ಡಿಸೋಜ ಮಂಗಳೂರು , ಗೃಹ ಜ್ಯೋತಿ ಬಗ್ಗೆ ಕ್ಲೆಮೆಂಟ್ ಬೆಂಜಮಿನ್ ವರದಿ ಮಂಡಿಸಿದರು.

ಕಾರ್‍ಯಕ್ರಮದಲ್ಲಿ ತಾಲೂಕಿನ 81 ಗ್ರಾಮಗಳಿಂದ ಆಗಮಿಸಿದ ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.

Leave a Comment

error: Content is protected !!