28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

ನಡ: ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮಣ್ಣಿನ ಹರಕೆಯ ಪುಣ್ಯ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗಣ್ಯರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿದವು.

ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮ ಮಯ್ಯ ಇವರ ನೇತ್ರತ್ವದಲ್ಲಿ ಅರ್ಚಕರುಗಳಾದ ಶ್ರೀಕಾಂತ ಭಟ್, ಶ್ರೀನಿವಾಸ ಭಟ್ ಇವರಿಂದ ಬೆಳಿಗ್ಗೆ ರುದ್ರಯಾಗ ನಡೆಯಿತು.

ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 8 ರಿಂದ ಆಹ್ವಾನಿತ ಕುಣಿತ ಭಜನಾ ತಂಡಗಳಾದ, ಶ್ರೀ ಮಕರ ಜ್ಯೋತಿ ಮಕ್ಕಳ ತಂಡ ಕನ್ಯಾಡಿ, ಶ್ರೀ ಲಕ್ಷ್ಮೀ ಮಕ್ಕಳ ಭಜನಾ ತಂಡ ನಡ, ಶ್ರೀ ಛತ್ರಪತಿ ಶಿವಾಜಿ ಭಜನಾ ತಂಡ ಉಜಿರೆ, ಬ್ರಹ್ಮದೇವ ಭಜನಾ ತಂಡ ಅರಳಿ, ಶ್ರೀ ಬಲಮುರಿ ಮಹಿಳಾ ತಂಡ ಲಾಯಿಲ, ಮತ್ತು ಮಹಿಳಾ ಭಜನಾ ತಂಡ ಕುಕ್ಕಾವು ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ದೇವರಿಗೆ ಏಕಾದಶ ರುದ್ರಾಭಿಷೇಕ, ಮತ್ತು ರಂಗಪೂಜೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸತೀಶ್ಚಂದ್ರ ಸುರ್ಯಗುತ್ತು, ಶ್ರೀಮತಿ ಸಂದೀಪಾ ಸತೀಶ್ಚಂದ್ರ, ಶ್ರೀಮತಿ ಮತ್ತು ಸಂಗ್ರಾಮ್ ಸುರ್ಯಗುತ್ತು, ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಅಜ್ರಿ, ಬಿ. ಮುನಿರಾಜ ಅಜ್ರಿ, ಡಾ| ಎಲ್.ಹೆಚ್ ಮಂಜುನಾಥ್, ಮತ್ತು ಊರ, ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ತೋಟತ್ತಾಡಿ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವೀಲ್ ಚೇರ್ ವಿತರಣೆ 

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ವಾಣಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ‘ಪರೋಪಕಾರ ಸಪ್ತಾಹ’

Suddi Udaya

“ವಿಮಾ ಗ್ರಾಮ” ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

Suddi Udaya
error: Content is protected !!