ಇಳಂತಿಲ : ಇಳಂತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಶ್ರೀಮತಿ ಸವಿತಾ ಅಧ್ಯಕ್ಷತೆಯಲ್ಲಿ ನಾಡಗೀತೆಯೊಂದಿಗೆ ವಿಶೇಷ ಚೇತನರ ವಿಶೇಷ ಸಮನ್ವಯ ಗ್ರಾಮ ಸಭೆಯು ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತ್ ನ ಗೌರವಾನ್ವಿತ ಸದಸ್ಯರು ಮತ್ತು ಪಂಚಾಯತ್ ನ ಕಾರ್ಯದರ್ಶಿ , CHO ಆದ ಶ್ರೀಮತಿ ಮಧುಶ್ರೀ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು , ವಿಪುಲ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗ್ರಾಮ ಪಂಚಾಯತ್ ಉಜಿರೆ ಭಾಗವಹಿಸಿದ್ದರು.
ಗ್ರಾಮ ಸಭೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ರಾಧಿಕಾ ಗ್ರಾಮ ಪಂಚಾಯತಿ ಇಳಂತಿಲ ಇವರು ಪ್ರಸ್ತಾವನೆ ಮತ್ತು ವರದಿಯನ್ನು ಮಂಡಿಸಿದರು. ನಂತರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ವಿಪುಲ್ ಗ್ರಾಮ ಪಂಚಾಯತ್ ಉಜಿರೆ ಇವರು ವಿಶೇಷ ಚೇತನರಿಗೆ ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಪಂಚಾಯತ್ ನ ಉಪಾಧ್ಯಕ್ಷೆ ಶ್ರೀಮತಿ ಸವಿತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ 11 ಜನ ವಿಶೇಷ ಚೇತನರಿಗೆ ಆರೋಗ್ಯ ಕಾರ್ಡ್ ,2 ಜನ ವಿಶೇಷ ಚೇತನರಿಗೆ ಎಂಡೋ ಸಲ್ಫಾನ್ ಕಾರ್ಡ್, ಹಾಗೂ 01 ವಿಶೇಷ ಚೇತನ ಮಗುವಿಗೆ ವೈದ್ಯಕೀಯ ವೆಚ್ಚವನ್ನು ನೀಡಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು , ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು , ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ವಿಶೇಷ ಚೇತನ ಬಂಧುಗಳು ಉಪಸ್ಥಿತರಿದ್ದರು. ಪಂಚಾಯತ್ ನ ಕಾರ್ಯದರ್ಶಿ ಸ್ವಾಗತಿಸಿ, ಧನ್ಯವಾದವಿತ್ತರು.