ಪೆರಿಂಜೆ: ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.14 ರಿಂದ ಪ್ರಾರಂಭಗೊಂಡು ಮಾ.19ರವರೆಗೆ ನಡೆಯಲಿದೆ.
ಮಾ.14 ರಂದು ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ರಾತ್ರಿ ಗಂಟೆ 9.30ಕ್ಕೆ ಪಡ್ಡ್ಯೋಡಿಗುತ್ತಿನಲ್ಲಿ ಉಪಹಾರ ರಾತ್ರಿ ಗಂಟೆ 10.00ಕ್ಕೆ ಪಡ್ಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ಪಡ್ಡ್ಯಾರಬೆಟ್ಟಕ್ಕೆ ಆಗಮನ, ಧ್ವಜಾರೋಹಣ, ಬಲಿ, ಚೆಂಡು ನಡೆಯಲಿದೆ.
ಮಾ.15 ರಂದು ಭೂತಬಲಿ ಉತ್ಸವ, ಮಾ.16 ರಂದು ಅಂಬೋಡಿ, ಬಲಿ ಉತ್ಸವ, ಹೂವಿನ ಪೂಜೆ, ರಥಾರೋಹಣ, ಮಾ.17 ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ಗಂಟೆ 12ಕ್ಕೆ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ 1.30 ರಿಂದ 7.30ರ ತನಕ ಮಹಾ ಅನ್ನಸಂತರ್ಪಣೆ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ, ಮಾ.18 ರಂದು ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡ್ಡ್ಯೋಡಿ ಗುತ್ತಿಗೆ ಭಂಡಾರ ಹಿಂದಿರುಗುವುದು., ಮಾ.19 ರಂದು ರಾತ್ರಿ ಗಂಟೆ 7.30 ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರು ಎ. ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿಯವರು ಪಡ್ಡ್ಯೋಡಿಗುತ್ತು ತಿಳಿಸಿದ್ದಾರೆ.
ಪ್ರತಿ ಸಂಕ್ರಮಣ ಮತ್ತು ಜಾತ್ರಾ ಸಮಯದ 5ದಿನಗಳು ಅನ್ನಸಂತರ್ಪಣೆ ಸೇವೆ ನಡೆಯಲಿರುವುದು.