ಧರ್ಮಸ್ಥಳ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಕೊಳೆನ್ಜಿಲೋಡಿ ತಿರುವಿನಿಂದ ನೇತ್ರಾವತಿ ನದಿಯವರೆಗೆ ಸ್ವಚ್ಛತಾ ಕಾರ್ಯವನ್ನು ಮಾ.12 ರಂದು ನಡೆಸಲಾಯಿತು.
ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತರು ರಸ್ತೆಯ ಬದಿಯಲ್ಲಿ ತಿಂದು ಬಿಸಾಡಿದ ಹಾಳೆ ತಟ್ಟೆಗಳು, ಪ್ಲಾಸ್ಟಿಕ್ ಲೋಟ, ನೀರಿನ ಬಾಟಲ್, ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಬಿಟ್ಟು ಹೋದ ಚಪ್ಪಲಿಗಳನ್ನು ಸ್ವಚ್ಛತೆ ಕಾರ್ಯ ಸ್ವಯಂಸೇವಕರು ನಡೆಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ ಪಾಯ್ಸ್ , ಮತ್ತು ಮೋಹನ್, ಹಾಗೂ ಜೈವಂತ್ ಪಟಗಾರ್ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದರು.
ಕಲ್ಮಂಜ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಗೌಡ ರವರು ಪಂಚಾಯತ್ ಅಧ್ಯಕ್ಷರ ಮುಖೇನಾ ಕಸವನ್ನು ತುಂಬಲು ಪ್ಲಾಸ್ಟಿಕ್ ಚೀಲವನ್ನು ಹಾಗೂ ಊಟದ ವ್ಯವಸ್ಥೆಯನ್ನು ಮಾಡಿದರು.