24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಡಾ. ಯೂಸುಫ್ ಕುಂಬ್ಲೆ ಅವರ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 35 ಕುಟುಂಬಕ್ಕೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ; ಮಂಗಳೂರು ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥ, ಅಂತಾರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ ಡಾ. ಯೂಸುಫ್ ಕುಂಬ್ಲೆ ಅವರ ತಾಯಿಯ ಹೆಸರಿನಲ್ಲಿರುವ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 35 ಕುಟುಂಬಗಳಿಗೆ ರಂಝಾನ್ ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.


ಹಿರಿಯ ಸಮಾಜ ಸೇವಕ, ಇಂಡಿಯಾನ ಆಸ್ಪತ್ರೆಯ ಒಡನಾಡಿ ಅಬ್ಬೋನು ಮದ್ದಡ್ಕ ಅವರ ನಿವಾಸದಲ್ಲಿ ಮಾ.14 ರಂದು ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಜಿಲ್ಲಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್‌ ಲತೀಫ್ ಸಾಹೆಬ್ ವಹಿಸಿದ್ದು, ಡಾ. ಯೂಸುಫ್ ಕುಂಬ್ಲೆ ಅವರ ಆರೋಗ್ಯ ಸೇವೆಯ ಪರಿಯನ್ನು ವಿವರಿಸಿದರು.
ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಖತೀಬ್ ಹಸನ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ದುಆ ನೆರವೇರಿಸಿದರು. ಇಬ್ರಾಹಿಂ ಮುಸ್ಲಿಯಾರ್, ಅಬ್ಬೋನು ಮದ್ದಡ್ಕ, ಅಬ್ಬಾಸ್ ಸುನ್ನತ್‌ಕೆರೆ ಉಪಸ್ಥಿತರಿದ್ದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಳಿಕ ಆಯ್ದ ಫಲಾನುಭವಿಗಳಿಗೆ ಕಿಟ್ ಹಾಗೂ ಇನ್ನೂ ಅರ್ಹರಿಗೆ ಆರ್ಥಿಕ ಮೊತ್ತ ನೀಡಲಾಯಿತು.

Related posts

ನಾಲ್ಕೂರು: ಪಾಲೆದಡಿ ಸಂಕಪ್ಪ ಪೂಜಾರಿ ನಿಧನ

Suddi Udaya

ಅಳದಂಗಡಿ :ಶ್ರೀ ಮಹಾಗಣಪತಿ ದೇವರಿಗೆ ದೃಢ ಕಲಶಾಭಿಷೇಕ

Suddi Udaya

“ಅಯ್ಯಪ್ಪ ಸ್ವಾಮಿಯ “108” ಶರಣುಘೋಷವನ್ನು 58 ಸೆಕೆಂಡಿನಲ್ಲಿ ಹೇಳಿದ ಉಜಿರೆಯ ಉದಯ್ ಎ.ಕೆ ಆಚಾರ್ಯ ರವರಿಗೆ “ಇಂಡಿಯಾ ಬುಕ್ ಆಫ್ ರೇಕಾರ್ಡ್”, ಕಲಾಂಸ್ ವರ್ಲ್ಡ್ ರೇಕಾರ್ಡ್, ಇಲೈಟ್ ಬುಕ್ ಆಫ್ ರೇಕಾರ್ಡ್”

Suddi Udaya

ವಿದ್ಯಾಮಾತಾದ ವಿದ್ಯಾರ್ಥಿಗಳಿಬ್ಬರು ಕೆ -ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಶ್ರೀ ದುರ್ಗಾ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ಖರೀದಿಗೆ ವಿಶೇಷ ಡಿಸ್ಕೌಂಟ್

Suddi Udaya

ದೀಪಾವಳಿಗೆ ಝಗಮಗಿಸಿದ ವೇಣೂರು

Suddi Udaya
error: Content is protected !!