September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

ಸೋಣಂದೂರು: ಇಲ್ಲಿಯ ಪಣಕಜೆಯಲ್ಲಿ ಮನೆಯಿಂದ ರಸ್ತೆ ಗೆ ಓಡಿ ಬಂದ 3 ವರ್ಷದ ಮಗುವಿಗೆ ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಘಟನೆ ಇಂದು (ಮಾ.16) ಬೆಳಿಗ್ಗೆ ನಡೆದಿದೆ.


ಪಣಕಜೆ ಮುಂಡಾಡಿ ನಿವಾಸಿ ಚಂದ್ರ ಶೇಖರ್ ಆಚಾರ್ಯ ಮತ್ತು ಉಷಾ ಆಚಾರ್ಯ ರವರ ದಂಪತಿಯ ಪುತ್ರ ಕೌಶಿಕ್ ಮೃತಪಟ್ಟ ಮಗು.

ಮುಂಡಾಡಿಯಲ್ಲಿ ಚಂದ್ರಶೇಖರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಓಡಿ ರಸ್ತೆಗೆ ಬಂದಿದೆ ಎನ್ನಲಾಗುತ್ತಿದ್ದು, ಈ ಸಂದರ್ಭ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತ್ತೆನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಅರಸಿನಮಕ್ಕಿ: ಉಪರಡ್ಕದಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ಡಿಕ್ಕಿ

Suddi Udaya

ಕೇಂದ್ರ ಬಜೆಟ್ ನಲ್ಲಿ ಕರಾವಳಿಯ ಅವಗಣನೆ ಖಂಡನಾರ್ಹ: ರಕ್ಷಿತ್ ಶಿವರಾಂ

Suddi Udaya

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಇಂದು (ಸೆ.25): ಬೆಳ್ತಂಗಡಿಯಲ್ಲಿ ಅರಿಹಂತ್ ಜೈನ್ ಮಾಲೀಕತ್ವದ ಅಯಾನ್ಶ್ ಮೊಬೈಲ್ ಮಳಿಗೆ ನವೀಕರಣಗೊಂಡು ಶುಭಾರಂಭ

Suddi Udaya

ಇಳಂತಿಲ: ಕುಮೇರುಜಾಲು ನಿವಾಸಿ ವೀರಮ್ಮ ನಿಧನ

Suddi Udaya

ಕೊಕ್ಕಡ ಸಂತ ಜೋನರ ಹಿ.ಪ್ರಾ.ಶಾಲೆ ಕೌಕ್ರಾಡಿ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!