September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಟಿಯು ವೇಣೂರಿನಲ್ಲಿ ನೂತನ ಆಟೋ ಯೂನಿಯನ್ ರಚನೆ

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನೂತನ ಆಟೋ ಯೂನಿಯನ್ ರಚಿಸಲಾಯಿತು.

ನೂತನ ಸಮಿತಿಗೆ ಅಧ್ಯಕ್ಷರಾಗಿ ನವಾಜ್, ಕಾರ್ಯದರ್ಶಿಯಾಗಿ ಹನೀಫ್, ಉಪಾಧ್ಯಕ್ಷರಾಗಿ ಇಮ್ರಾನ್, ಜೊತೆ ಕಾರ್ಯದರ್ಶಿಯಾಗಿ ಜಲಾಲ್, ಕೋಶಾಧಿಕಾರಿಯಾಗಿ ಆದಂ ಹಾಗೂ ಗೌರವ ಅಧ್ಯಕ್ಷರಾಗಿ ಸಾದತ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರು ಆರಿಫ್ ಉಜಿರೆ ಅವರು, ಕಾರ್ಮಿಕ ಸಂಘಟನೆಯ ಉದ್ದೇಶ, ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಆಟೋ ಯೂನಿಯನ್ ವಿವಿಧ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಇಕ್ಬಾಲ್ ಪಣಕಜೆ ಹಾಗೂ ಕೋಶಾಧಿಕಾರಿ ಅಬ್ದುಲ್ಲ ಜಿ.ಕೆ. ಉಪಸ್ಥಿತರಿದ್ದರು.

Related posts

ದಯಾ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ತೆಕ್ಕಾರಿನಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಅಂಡಿಂಜೆ: ಗ್ರಾ.ಪಂ. ನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ

Suddi Udaya

ಧರ್ಮಸ್ಥಳಕ್ಕೆ ಮದುವೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಅಪಘಾತ: 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯ

Suddi Udaya

ಹೊಸಂಗಡಿ: ಹಿಂದೂ ರುದ್ರ ಭೂಮಿಗೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಸಹಾಯಧನ

Suddi Udaya

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

Suddi Udaya
error: Content is protected !!