ಮಡಂತ್ಯಾರು:ಶ್ರೀ ರಾಮ ದೇವಸ್ಥಾನ ಪಡುಕೋಣೆ ನಾಡ ಬೈಂದೂರು ತಾಲೂಕಿನಲ್ಲಿಸೀತಾರಾಮ ಕಲ್ಯಾಣೊತ್ಸವದ ಪ್ರಯುಕ್ತ ನಡೆದ ಅಹ್ವಾನಿತ ತಂಡಗಳ ಅಂತರ್ ಜಿಲ್ಲಾ ಮಟ್ಟದ (30 ನಿಮಿಷಗಳ) ಕುಣಿತ ಭಜನಾ ಸ್ಪರ್ಧೆ ಯಲ್ಲಿ ಹಾಗೂ ಶ್ರೀ ಹುಲಿಗಿರ್ತಿ ಮತ್ತು ಸಹ ಪರಿವಾರ ದೇವಸ್ಥಾನ ಸರ್ಪನ ಕಟ್ಟೆ ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕುಣಿತಾ ಭಜನೆ ಸ್ಪರ್ಧೆಯಲ್ಲಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ,ಮಡಂತ್ಯಾರು ತಂಡವು ಎರಡು ಕಡೆಯು ಪ್ರಥಮ ಸ್ಥಾನ ವನ್ನ ಪಡೆದುಕೊಂಡಿತು.
30 ವರ್ಷಗಳಿಂದ ನಿರಂತರವಾಗಿ ಪಾರೆಂಕಿ ದೇವಸ್ಥಾನದಲ್ಲಿ ಭಜನಾ ಸೇವೆಗೈಯುತ್ತ ಕಳೆದ 2 ವರ್ಷಗಳಿಂದ ಕುಣಿತಾ ಭಜನೆ ಸ್ಪರ್ಧೆಯಲ್ಲಿ ತಂಡವು ಭಾಗವಹಿಸುತಿದ್ದು ಹಲವಾರು ಜಿಲ್ಲಾ, ರಾಜ್ಯ ಮಟ್ಟದ ಕುಣಿತ ಭಜನೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನ ಪಡೆದಿದೆ, ಜೊತೆಗೆ ನಿರಂತರವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮವನ್ನ ನೀಡುತ್ತಿದೆ.
ಪ್ರಶಸ್ತಿ ಪಡೆದ ತಂಡದಲ್ಲಿ ಚಂದ್ರಹಾಸ ಬಳಂಜ, ಧೀರಾಜ್ ಮಡಂತ್ಯಾರು, ಗಿರೀಶ್, ಶೈಲೇಶ್, ಮೋಹನಂದ, ನೀಶಾಂತ್, ದೀಕ್ಷಿತ್,ಸುಕೇಶ್ ರಕ್ಷಾ, ಚೈತ್ರ, ಯಶ್ವೀತಾ, ಮನೀಷಾ ಭಾಗವಹಿಸಿದ್ದು ತಂಡದೊಂದಿಗೆ ಮಂಡಳಿಯ ಗೌರವಾಧ್ಯಕ್ಷರಾದ ಯೋಗೀಶ್ ಹೆಗ್ಡೆ, ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ ಸದಸ್ಯರಾದ ಗುರುರಾಜ್, ಅಭಿಲಾಷ್ ಹಾಗೂ ಕೀರ್ತನ್ ಜೊತೆಗಿದ್ದು ಸಹಕರಿಸಿದರು.ತಂಡಕ್ಕೆ ಪ್ರಖ್ಯಾತ ತರಬೇತುದಾರರಾದ ವಿಜಯ್ ನಿರ್ಕೇರೆಯವರು ತರಬೇತಿ ನೀಡಿದ್ದಾರೆ.