April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನವೀಕೃತ ಮಡಂತ್ಯಾರು ಶಾಖೆಯ ಉದ್ಘಾಟನೆ

ಮಡಂತ್ಯಾರು : ದೇಶದ ಸಾರ್ವಜನಿಕ ಕ್ಷೇತ್ರದ 5ನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಡಂತ್ಯಾರು ಶಾಖೆಯ ನವೀಕೃತ ಶಾಖೆಯ ಉದ್ಘಾಟನಾ ಸಮಾರಂಭ ಮಾ.16 ರಂದು ನಡೆಯಿತು.

ವಲಯ ಮುಖ್ಯಸ್ಥರಾದ ರೇಣು ನಾಯರ್ ನವೀಕೃತ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಾ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಡಂತ್ಯಾರ್ ಗೆ ಅಭಿವೃದ್ಧಿಗೆ ಪೂರಕವಾಗಿ ಸಕಲ ಸವಲತ್ತು ಇರುವ ನವೀಕೃತ ಶಾಖೆಯನ್ನು ನೀಡುವ ಗುರಿಯನ್ನು ಇಂದು ತಲುಪಿದ್ದೇವೆ, ಬ್ಯಾಂಕ್ ಗಳು ವಿಲೀನಗೊಂಡ ನಂತರ ಹೆಚ್ಚಿನ ಸವಲತ್ತುಗಳನ್ನು ಒದಗಿಸುತ್ತಿದೆ ಹಾಗೂ ಇದರ ಲಾಭ ಜನಸಾಮಾನ್ಯರಿಗೆ ದೊರಕುತ್ತಿದೆ. ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಮಹೇಶ ಜೆ ನೆರಿದಿದ್ದ ಗಣ್ಯರನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿ ಮಡಂತ್ಯಾರಿನ ಜನತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಈ ಶಾಖೆಯು ಸ್ಥಳೀಯರ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸುವಲ್ಲಿ ಬಹು ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಪಂಚಾಯತ್ ಅಧ್ಯಕ್ಷೆ ರೂಪಾ ನವೀನ್ ಮಾತನಾಡುತ್ತ ಗ್ರಾಮ ಪಂಚಾಯತ್ ಗೆ ಈ ಬ್ಯಾಂಕಿನಿಂದ ಹಲವಾರು ಪ್ರಯೋಜನ ಪಡೆದಿದೆ ಹಾಗೂ ನಮ್ಮ ಎಲ್ಲಾ ಕೆಲಸ ಕಾರ್ಯಗಳು ಸಾಂಗವಾಗಿ ನಡೆಯುವಲ್ಲಿ ಶಾಖೆಯ ಸಿಬಂದಿಗಳು ಸಹಕರಿಸುತ್ತಿದ್ದಾರೆ ಎಂದರು.

ಇನ್ನೊರ್ವ ಮುಖ್ಯ ಅತಿಥಿಗಳಾದ ವಿಠಲ ಶೆಟ್ಟಿ ಮಾತನಾಡಿ ಬ್ಯಾಂಕಿನ ಹಲವಾರು ಯೋಜನೆಗಳು ಜನರಿಗೆ ತಲುಪುವುದರಿಂದ ಜನರಿಗೆ ತುಂಬಾ ಪ್ರಯೋಜನವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಯಂತ್ ಶೆಟ್ಟಿ ಹಾಗೂ ಅಶೋಕ್ ಗುಂಡ್ಯಲಿಕೆ ಮಾತನಾಡುತ್ತಾ ಶಾಖೆಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು.

ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಶಾಖೆಯನ್ನು ನವೀಕರಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ ಹಾಗೂ ತನ್ನ ಗ್ರಾಹಕರಿಗಾಗಿ ವಿವಿಧ ಡಿಜಿಟಲ್ ಉತ್ಪನ್ನಗಳು, ಠೇವಣಿದಾರರಿಗೆ, ಹಿರಿಯ ನಾಗರಿಕರಿಗೆ ಅತ್ಯಾಕರ್ಷಕ ಬಡ್ಡಿ ದರ ಹಾಗೂ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ವಿವಿಧ ಸಾಲಗಳನ್ನು ನೀಡುತ್ತಿದೆ. ಜನತೆಗೆ ಹಣಕಾಸಿನ ಸಾಕ್ಷರತೆ ಮತ್ತು ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯವು ಸದಾ ಬದ್ಧವಾಗಿರುತ್ತದೆ.

ಕಾರ್ಯಕ್ರಮದ ಶಾಖಾ ಪ್ರಬಂಧಕ ಅಶೋಕ್ ಕೋಟ್ಯಾನ್ ನಿರೂಪಿಸಿದರು.

Related posts

ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ”ಪ್ರಚಲಿತ ಉತ್ತಮ ಉತ್ಪಾದನಾ ಅಭ್ಯಾಸಗಳು” ನಿಯಂತ್ರಣ ವ್ಯವಹಾರಗಳ ಕುರಿತಾದ ವಿಚಾರಗೋಷ್ಠಿ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ದಿ| ದೇವಪ್ಪ ಗೌಡ ಉಜಿರೆ ರವರಿಗೆ ಶ್ರದ್ಧಾಂಜಲಿ

Suddi Udaya

ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ ಮಗ: ಅನಾರೋಗ್ಯದ ನಡುವೆಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ ರೋಹಿಣಿ

Suddi Udaya

ಗೇರುಕಟ್ಟೆ: ಇರೋಲು ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

Suddi Udaya

ವಿಧಾನ ಪರಿಷತ್ ಚುನಾವಣೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಪದವಿಧರ ಕ್ಷೇತ್ರ ಶೇ 78.82 ಶಿಕ್ಷಕರ ಕ್ಷೇತ್ರ ಶೇ 81.54 ಮತದಾನ

Suddi Udaya

ಬೆಳೆ ವಿಮೆ ಸೌಲಭ್ಯ ಇದುವರೆಗೂ ದೊರೆಯದಿರುವ ಕುರಿತು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನರಿಗೆ ಪತ್ರ

Suddi Udaya
error: Content is protected !!