25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಪೆರಿಂಜೆ: ಪಡ್ಡ್ಯಾರಬೆಟ್ಟ ದೈವಸ್ಥಾನ ಕ್ಷೇತ್ರ ವಾರ್ಷಿಕ ಜಾತ್ರೋತ್ಸವ ಸಂಪನ್ನ, ಸಾಧಕರಿಗೆ ಗೌರವ, ವಿದ್ಯಾರ್ಥಿ ವೇತನ ವಿತರಣೆ

ಬೆಳ್ತಂಗಡಿ, : ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಮಂಗಳವಾರ ರಾತ್ರಿ ನಡೆದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಸಮ್ಮಾನಿಸಲಾಯಿತು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೇಣೂರಿನಲ್ಲಿ ವೈದ್ಯರಾಗಿ, 38 ವರ್ಷಗಳಿಂದ ಬಡಜನತೆಗೆ ಸೇವೆ ನೀಡುತ್ತಾ ಬಂದಿರುವ ಡಾ.ಕೆ.ಎನ್. ರವೀಂದ್ರ ಪ್ರಸಾದ್ ಬಡಕೋಡಿಗುತ್ತು, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾ‌ನ ಆಡಳಿತ ಮೊಕ್ತೇಸರ, ಸಹಕಾರಿ ಕ್ಷೇತ್ರ, ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ ವೇಣೂರು ಕರಿಮಣೇಲು ಖಂಡಿಗ ಜಯರಾಮ್ ಶೆಟ್ಟಿ, ಮತ್ತುರಾಜಕೀಯ, ಸಾಮಾಜಿಕ, ಸಹಕಾರಿ ಕ್ಷೇತ್ರದ ಸಾಧನೆಗಾಗಿ ಪೆರಾಡಿ ಸತೀಶ್ ಕಾಶಿಪಟ್ಣ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿದ ಸತೀಶ್ ಕಾಶಿಪಟ್ನ ಮಾತನಾಡಿ ಪಡ್ಯಾರ ಬೆಟ್ಟು ಕ್ಷೇತ್ರದ ದೈವಗಳು ಅವರೆ ದೇವರು ಅವರೆ.ಸಹಸ್ರಾರು ಭಕ್ತಾದಿಗಳಿಗೆ ಅಭಯನೀಡುವ ಶ್ರಿ ಕೊಡಮಣಿತ್ತಾಯ ಸನ್ನಿಧಿಯಲ್ಲಿ ಗೌರವ ಸ್ವಿಕರಿಸುವುದು ಎಂದರೆ ದೇವರ ಅನುಗ್ರಹ ಪಡೆದಂತೆ. ಇಲ್ಲಿನ ಆಡಳಿತ ಮೊಕ್ತೆಸರರಾದ ಜೀವಂದರ್ ಕುಮಾರ್ ರವರು ಮಗುವಿನಂತ ಮನಸ್ಸಿನವರು.ಕ್ಷೇತ್ರದ ಸಾನಿದ್ಯವನ್ನು ಹೆಚ್ಚಿಸಿದವರು.ಭಕ್ತರನ್ನು ಪ್ರೀತಿಯಿಂದ ಕಾಣುವ ಇವರು ಎಲ್ಲರೊಂದಿಗೆ ಮುಕ್ತವಾಗಿ ,ಗೌರವಯುತವಾಗಿ ನಡೆಯುವವರು.ಇವರ ಪ್ರೀತಿಯ ಗೌರವ ಪಡೆಯುವುದು ಪೂರ್ವ ಜನ್ಮದ ಪುಣ್ಯದ ಫಲ ಎಂದರು.ಡಾ ಕೆ ಎನ್ ರವೀಂದ್ರ ಪ್ರಸಾದ್ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿಯೊಬ್ಬರು ದೈವ ದೇವರಲ್ಲಿ ಭಕ್ತಿ ನಂಬಿಕೆ ಇಡುವ ಜೊತೆ ತಮ್ಮ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಹಿರಿಯರ ಅಹಾರ ಪದ್ದತಿಯೇ ಶ್ರೇಷ್ಠ ಅದನ್ನೆ ಪಾಲಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು‌.

ಅನುವಂಶೀಯ ಆಡಳಿತ ಮೊಕ್ತೇಸರಎ.ಜೀವಂದರ್ ಕುಮಾರ್, ಪತ್ನಿಸುಲೋಚನಾ, ಪುತ್ರರಾದ ವಿಕಾಸ್ ಜೈನ್, ವಿಶ್ವಾಸ್ ಜೈನ್ ,ಕ್ಷೇತ್ರದ ಪ್ರದಾನ ಅರ್ಚಕ ರಾಮದಾಸ ಅಸ್ರಣ್ಣ ಅವರಿಂದ ಸಮ್ಮಾನ ಕಾರ್ಯಕ್ರಮ ನೆರವೇರಿತು.ಪ್ರವೀಣ್ ಮೂಡುಕೋಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ದೈವದ,ಕುರುಸಂಬಿಲ ನೇಮೋತ್ಸವ ನಡೆಯಿತು.

Related posts

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ: ರೂ.571 ಕೋಟಿ ವಾರ್ಷಿಕ ವ್ಯವಹಾರ, ರೂ.1.53 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಟ್

Suddi Udaya

ಬೆಳ್ತಂಗಡಿ ಮಾದರಿ ಶಾಲೆಗೆ ಲಯನ್ಸ್ ಕ್ಲಬ್ ನಿಂದ ಶುದ್ಧನೀರು ಯಂತ್ರ ಕೊಡುಗೆ

Suddi Udaya

ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್ ರ್‍ಯಾಂಕ್ ಪ್ರಕಟ: ಗೇರುಕಟ್ಟೆ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜಿಗೆ DMIT ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಒಟ್ಟು 6 ರ್‍ಯಾಂಕ್

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಮರೋಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಹಾಗೂ ಮಹಿಳಾ ದಿನಾಚರಣೆ

Suddi Udaya

ಶಿಶಿಲ: ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಕಪಿಲಾ ನದಿ

Suddi Udaya
error: Content is protected !!