ಬೆಳ್ತಂಗಡಿ: ಕಳೆದ 78 ವರ್ಷಗಳಿಂದ ಮುಳಿಯ ಸಂಸ್ಥೆಯು ಕರಿಮಣಿ ಉತ್ಸವ, ಡೈಮಂಡ್, ಬಲೆ, ನೆಕ್ಲೇಸ್ ಹಬ್ಬ ನಡೆಸಿ ಗ್ರಾಹಕರಿಗೆ ನಗುಮೊಗದ ಸೇವೆ ನೀಡುವ ಮೂಲಕ ಪ್ರಸಿದ್ದಿಯನ್ನು ಪಡೆದಿದೆ. ಬೆಳೆಯುತ್ತಿರುವ ಉಜಿರೆಯಲ್ಲಿ ಮುಳಿಯದ ಇನ್ನೊಂದು ಶಾಖೆ ಪ್ರಾರಂಭಿಸಿ ಎಂದು ಉಜಿರೆ ಬೆನಕ ಹೆಲ್ತ್ ಸೆಂಟರ್ ನ ಪಬ್ಲಿಕ್ ರಿಲೇಶನ್ಸ್ ಆಫೀಸರ್ ಎಸ್.ಜಿ. ಭಟ್ ಹೇಳಿದರು.
ಅವರು ಮಾ.20 ರಂದು ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಪೆಸ್ಟ್ ಉದ್ಘಾಟಿಸಿ ಮಾತನಾಡಿದರು.
ಕಿರುತೆರೆ ಕಲಾವಿದೆ ದೀಪ ಕಟ್ಟೆ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿ ಚಿನ್ನಾಭರಣಗಳ ಪರಿಶುದ್ದತೆ ಮತ್ತು ನಂಬಿಕೆಗೆ ಇನ್ನೊಂದು ಹೆಸರು ಮುಳಿಯ ಸಂಸ್ಥೆ. ಮುಳಿಯದಲ್ಲಿ ಉತ್ತಮವಾದ ಕಲೆಕ್ಷನ್ ಮತ್ತು ಡಿಸೈನ್ ಇದೆ, ಗ್ರಾಹಕರಿಗೆ ಆಭರಣದ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿದೆ ಎಂದರು.
ವೇದಿಕೆಯಲ್ಲಿ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕೃಷ್ಣ ಮೂರ್ತಿ, ಪ್ರೊಡೆಕ್ಟ್ ಮ್ಯಾನೇಜರ್ ಪ್ರಶಾಂತ್ ಎಸ್ ಉಪಸ್ಥಿತರಿದ್ದರು.
ಸಿಬ್ವಂದಿ ಜಯಲಕ್ಷ್ಮಿ ಪ್ರಾರ್ಥಿಸಿ, ಶಾಖಾ ಪ್ರಬಂಧಕ ಅಶೋಕ್ ಬಂಗೇರ ಸ್ವಾಗತಿಸಿದರು. ಉಪಶಾಖ ಪ್ರಬಂಧಕ ಲೋಹಿತ್ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು. ಮುಳಿಯ ಜುವೆಲ್ಸ್ ಸಿಬ್ಬಂದಿಗಳು ಸಹಕರಿಸಿದರು.