ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಬೆಳ್ತಂಗಡಿ: ರಾಷ್ಟ್ರವನ್ನು ಕಟ್ಟುವ ಶಕ್ತಿಯನ್ನು ಸೃಷ್ಟಿಸುವುದು ಶಿಕ್ಷಣದ ಉದ್ದೇಶ. ಶಿಕ್ಷಕರು ಜೀವನಪೂರ್ತಿ ಸ್ವಯಂ ಕಲಿಕೆ ಮಾಡುವ ವಿದ್ಯಾರ್ಥಿಗಳನ್ನು ಸೃಷ್ಟಿಸಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿ, ಸುರೇಶ್ ಆಚಾರ್ಯ, ಮುಖ್ಯೊಪಾಧ್ಯಾಯರು, ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ, ದೊಂಪದಪಲ್ಕೆ ಇವರು ಮಾತನಾಡಿದರು.

ಬೆಳ್ತಂಗಡಿ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ, ದೊಂಪದಪಲ್ಕೆ,ಉಜಿರೆ ಇಲ್ಲಿ ಹಮ್ಮಿಕೊಂಡಿದ್ದೇವೆ. ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಸುರೇಶ್ ಆಚಾರ್ಯ ಮುಖ್ಯೊಪಾಧ್ಯಾಯರು, ದ.ಕ .ಜಿ. ಪಂ. ಹಿ . ಪ್ರಾಥಮಿಕ ಶಾಲೆ ದೊಂಪದಪಲ್ಕೆ ಇವರು ನೆರವೇರಿಸಿದರು.

ಬದುಕಿನ ಜೀವನ ಎಲ್ಲವನ್ನು ಕಲಿಸುತ್ತದೆ. ಎನ್.ಎಸ್.ಎಸ್ ಎಂದರೆ ನಾನು ಸದಾ ಸಿದ್ಧ ಮತ್ತು ನಾನು ಶಿಸ್ತಿನ ಸಿಪಾಯಿ ಎಂದು ಅರ್ಥೈಸಬಹುದು, ಪ್ರಜಾಪ್ರಭುತ್ವ ದೇಶದಲ್ಲಿ ಬದುಕುವ ಹಾಗೆ ನಿಸ್ವಾರ್ಥ ಸೇವೆಯಲ್ಲಿ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಮೆಚ್ಚುಗೆಯಾಗಿ ಗುರುತಿಸಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಕಲ್ಪಿಸುತ್ತದೆ ಎಂದು ಮೋಹನ್ ಗೌಡ ಕಲ್ಮಂಜ, ಆಡಳಿತ ನಿರ್ದೇಶಕರು, ಕರ್ನಾಟಕ ಆರ್ಗನಿಕ್ ಫೌಂಡೇಶನ್ ಮಂಗಳೂರು ಇವರ ಕಾರ್ಯಕ್ರಮದ ಕುರಿತು ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ವಹಿಸಿದ್ದರು.

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಪ್ರಮಾಣ ವಚನ ಬೋಧಿಸಿದರು.

ವೇದಿಕೆಯಲ್ಲಿ ಸೀತಾರಾಮ ಶೆಟ್ಟಿ , ಅಧ್ಯಕ್ಷರು ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ ,ಓಡಲ, ಶ್ರೀಮತಿ ಜಮನ ಕೆ. ಎಸ್, ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ಬದನಾಜೆ, ಬಿ.ಎ.ಶಮೀಯುಲ್ಲಾ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಇವರು ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಬಿ .ಎ. ಶಮೀಯುಲ್ಲಾ ಸ್ವಾಗತಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕಿ ಅಂಬಿಕ ವಂದಿಸಿದರು.

Leave a Comment

error: Content is protected !!