September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಗರಿಗಳ ಹಬ್ಬದ ಆಚರಣೆ

ಬೆಳ್ತಂಗಡಿ: ಬೆಳ್ತಂಗಡಿ ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಗರಿಗಳ ಹಬ್ಬವನ್ನು ಆಚರಿಸಲಾಯಿತು. ಜಯಗೋಷಗಳೊಂದಿಗೆನ ಏಸುಕ್ರಿಸ್ತರ ಜೆರುಸಲೇಮ್ ಪ್ರವೇಶವನ್ನು ಗರಿಗಳ ಹಬ್ಬವೆಂದು ಆಚರಿಸಲಾಗುತ್ತದೆ.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಅತಿ ವಂದನೀಯ ಬಿಷಫ್ ಲಾರೆನ್ಸ್ ಮುಕ್ಕುಯಿಯವರು ಆಚರಣೆಗಳ ನೇತೃತ್ವ ವಹಿಸಿದ್ದರು. ವಂದನೀಯ ಫಾದರ್ ಟೋಮಿ ಮಟ್ಟಂ , ವಂದನೀಯ ಫಾದರ್ ಲಾರೆನ್ಸ್ ಫೋನೊಲಿಲ್, ವಂದನೀಯ ಫಾದರ್ ಕುರಿಯಕೋಸ್ ಧರ್ಮ ಭಗನಿಯರು ಹಾಗೂ ವಿಶ್ವಾಸಿಗಳು ಹಬ್ಬದಲ್ಲಿ ಪಾಲ್ಗೊಂಡರು.

ಕ್ರಿಸ್ತರ ಚರಿತ್ರೆ ಪ್ರವೇಶವು ಅವರ ಸಹನ ಹಾಗೂ ಶಿಲುಬೆ ಮರಣದ ಮುನ್ನುಡಿ. ಜೆರುಸಲೇಮ್ ಪ್ರವೇಶ ಕ್ರಿಸ್ತರ ಸಹನೆ, ಮರಣ ಹಾಗೂ ಉದ್ಯಾನದ ಕಡೆಗಿನ ದಾರಿಯ ಆರಂಭ. ಜಯ ಘೋಷ ಹಾಡಿದ ಅದೇ ಜನರು ಅವರನ್ನು ಕೊಲ್ಲಲು ಅಧಿಕಾರಿಗಳನ್ನು ಒತ್ತಾಯಿಸುತ್ತಾರೆ. ಅದೇ ಜನರ ಪಾಪ ಪರಿಹಾರಕ್ಕಾಗಿ ಏಸುಕ್ರಿಸ್ತರು ಶಿಲುಬೆಗೇರಿ ಮರಣ ಹೊಂದುವರು. ಇದು ಕ್ರೈಸ್ತ ಬಾಂಧವರಿಗೆ ಪವಿತ್ರ ವಾರ.

ಯೇಸು ಕ್ರಿಸ್ತರ ಜೆರುಸಲೇಮ್ ಪ್ರವೇಶದಿಂದ ಈಸ್ಟರ್ ಆದಿತ್ಯವಾರದ ತನಕಿನ ದಿನಗಳು ಕ್ಷಮೆಯ ಕರುಣೆಯ ದೇವರ ಪ್ರೀತಿಯನ್ನು ಮನುಕುಲಕ್ಕೆ ತಿಳಿಯಪಡಿಸಿದ ದಿನಗಳಾಗಿವೆ. ಯೇಸುಕ್ರಿಸ್ತರನ್ನು ಜೆರುಸಲೇಮ್ ನಗರಕ್ಕೆ ಒತ್ತುಹೊಯ್ದ , ಏಸುಕ್ರಿಸ್ತರ ಸಂದೇಶವನ್ನು ಲೋಕಕ್ಕೆ ಸಾರಲು ಈ ಹಬ್ಬವು ಕರೆ ನೀಡುತ್ತದೆ.

Related posts

ಉಜಿರೆಯಲ್ಲಿ ಇನಾರ ಡೆಂಟಲ್ ಕೇರ್ ದಂತ ಚಿಕಿತ್ಸಾಲಯ ಶುಭಾರಂಭ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ ವಿದ್ಯಾರ್ಥಿಗೆ ರಾಜ್ಯಮಟ್ಟದ ಪ್ರಶಸ್ತಿ ಪತ್ರ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಪಿಲಾತಬೆಟ್ಟು: ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ-ರಕ್ಷಕ ಸಭೆ

Suddi Udaya

ಶಿಶಿಲ ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya
error: Content is protected !!