28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ರಾಧಾಕೃಷ್ಣ ಭಂಡಾರಿ ನಿಧನ

ಬೆಳ್ತಂಗಡಿ; ಮೂಲತಃ ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ‌ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಅವರು ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯ ನೋವು ಆರಂಭವಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಾ.24 ರಂದು ನಡೆದಿದೆ.

ಉಜಿರೆಯ ಪ್ರಸಿದ್ಧ ರಾಜ್ ಹೇರ್ ಡ್ರೆಸ್ಸಸ್ ಸಂಸ್ಥೆಯ ಮಾಲಿಕರಾಗಿರುವ ದೇವರಾಜ ಭಂಡಾರಿ ಮತ್ತು ರತ್ನಾವತಿ ದಂಪತಿ ಪುತ್ರನಾಗಿರುವ ಅವರು ತಂದೆಯ ಜೊತೆಗೇ ದೀರ್ಘ ಕಾಲ ಕ್ಷೌರಿಕ ವೃತ್ತಿ ನಡೆಸುತ್ತಿದ್ದರು. ಬಳಿಕ ಇತ್ತೀಚಿನ ಕೆಲ‌ ವರ್ಷಗಳಿಂದ ಆರ್.ಕೆ ಸೆಲೂನ್ ಎಂಬ ಸ್ವಂತ ಅಂಗಡಿ ಹೊಂದಿ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿದ್ದರು.

ಜೊತೆಗೆ ಉಜಿರೆ ಪೇಟೆಯಲ್ಲಿ ಆರ್ ಕೆ ಬೇಕರಿ ಕೂಡ ಹೊಂದಿದ್ದರು. ಇವರು ಉಜಿರೆ ಸುರ್ಯ ರಸ್ತೆಯಲ್ಲಿ ನೂತನ ಗೃಹ ನಿರ್ಮಿಸಿದ್ದು ತಿಂಗಳ ಹಿಂದಷ್ಟೇ ಅದ್ದೂರಿಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.

ಮೃತರು ತಂದೆ, ತಾಯಿ, ಓರ್ವ ಸಹೋದರ ಕಮಲಾಕ್ಷ ಭಂಡಾರಿ, ಪತ್ನಿ ತಾರಾ, ಮಕ್ಕಳಾದ ತೇಜಶ್ವಿನಿ ಮತ್ತು ಪವನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಬಳಂಜ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಿ.ಎಸ್.ಸಿ ಕೇಂದ್ರ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್.ಇ) ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಕನ್ಯಾಡಿ: ಪಾದೆ ನಿವಾಸಿ ಗಂಗಯ್ಯ ಗೌಡ ನಿಧನ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು : ಪಂಚಪ್ರಾಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

Suddi Udaya

ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya

ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನೋತ್ಸವ

Suddi Udaya
error: Content is protected !!