ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಇದರ ಬ್ರಹ್ಮ ಕಲಶೋತ್ಸವದ ಕೊನೆಯ ದಿನವಾದ ಇಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಬಿ. ಕೆ. ಲೋಕೇಶ್ ರಾವ್ ವಹಿಸಿದರು.
ಸುರೇಶ್ ಪರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಜಾನುವಾರು ಅಧಿಕಾರಿ ಶ್ರೀನಿವಾಸ ತೋಡ್ತಿಲ್ಲಾಯ, ಗಣೇಶ್ ಆಚಾರ್ಯ, ಚಾರ್ಮಾಡಿ ಕಜಕ್ಕೆ ಗೋಪಾಲಕೃಷ್ಣ ದೇವಸ್ಥಾನ ಅಧ್ಯಕ್ಷ ಪಾಂಡುರಂಗ ಮರಾಠೆ, ಇಂದಬೆಟ್ಟು ಅರ್ಧನಾರೀಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಮನ್ನಡ್ಕ,, ಜಯದುರ್ಗೆ ಬೈಲುವಾರು ಸಮಿತಿ ಪ್ರಮುಖರು ಜಯಂತ ಹೆಗ್ಡೆ ಹೊಸ್ತೋಟ, ಲಕ್ಷ್ಮೀದೇವಿ ಬೈಲುವಾರು ಸಮಿತಿ ಪ್ರಮುಖರು ಭಾಸ್ಕರ ಗೌಡ ಪಲದ್ರೋಟ್ಟು, ಶಾಂಭವಿ ಬೈಲುವಾರು ಸಮಿತಿ ಪ್ರಮುಖರು ನಾರಾಯಣ ಗೌಡ ನೆಕ್ಕಿಲೊಟ್ಟು, ದಾಕ್ಷಾಯಿಣಿ ಬೈಲುವಾರು ಸಮಿತಿ ಪ್ರಮುಖರು ನಾರಾಯಣ ಮಲೆಕುಡಿಯ ಕೊಲ್ಲಾಲ್, ಬೇಬಿ ಸದಾಶಿವ ಗೌಡ, ವಸಂತ ಕಲಪ್ಪಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿಯ ಲೋಕೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಬೈಲುವಾರು ಸಮಿತಿಯ ರವೀಂದ್ರ ಪೂಜಾರಿ, ಆನಂದ ಗೌಡ , ಲಕ್ಷ್ಮಣ ಪೂಜಾರಿ, ಗೋಪಾಲ ಗೌಡ, ದೀಕ್ಷಿತ್ ಹೆಚ್, ಸಂಜೀವ ಗೌಡ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ಗಾಯತ್ರಿದೇವಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು ಸ್ವಾಗತಿಸಿ, ಸತೀಶ್ ಕಾಮತ್ ಧನ್ಯವಾದವಿತ್ತರು.
ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳಾದ ಕವಾಟೋದ್ಘಾಟನೆ, ತೈಲಾಭಿಷೇಕ, ಮಹಾಬಲಿಪೀಠ ಪ್ರತಿಷ್ಠೆ, ಹೋಮಕಲಶಾಭಿಷೇಕ, ತತ್ವ ಕಲಶಾಭಿಷೇಕ, ಧ್ವಜಪ್ರತಿಷ್ಠೆ, ಪರಿಕಲಶಾಭಿಷೇಕ, ಕುಂಬೇಶಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಿತು.