April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

17 ವರ್ಷಗಳಿಂದ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಂಧನ

ಬೆಳ್ತಂಗಡಿ: ಸುಮಾರು 17 ವರ್ಷಗಳಿಂದ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ನಿವಾಸಿಯನ್ನು ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕಂಚಿಲ ಮನೆ ಕುಕ್ಕಾಜೆ ನಿವಾಸಿ ಅಬುಸಾಲಿ (41ವ) ಬಂಧಿತ ಆರೋಪಿ.


ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ :189/2007 ಕಲಂ : 504,506,3ಕ್ಕೆ ಸಂಬಂಧಿಸಿದಂತೆ 17ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಬೆಳ್ತಂಗಡಿಯಲ್ಲಿ ತಲೆಮರೆಸಿ ಕೊಂಡಿದ್ದಾತನನ್ನು ಮಾ.29 ರಂದು, ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಿಕರಾದ ರಾಮಕೃಷ್ಣ ರವರು ಮತ್ತು ಹೆಚ್ ಸಿ ರಾಜೇಶ್ ಎಸ್, ಹೆಚ್ ಸಿ ಗಣೇಶ್ ಏನ್ ರವರುಗಳ ತಂಡ, ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ದಸ್ತಗಿರಿ ಮಾಡಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

Related posts

ಉಜಿರೆ: ಸೌರಭ ಆರ್ಕೇಡ್ ನಲ್ಲಿ ನೂತನ “ಸೆವೆನ್ತ್ ಹೆವೆನ್ (7th Heaven)” ಕೇಕ್ ಹೌಸ್ ಶುಭಾರಂಭ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ

Suddi Udaya

ಬ್ರೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya

ಕಣಿಯೂರು: ಪಿಲಿಗೂಡು ಹಾ.ಉ.ಸ. ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.61.79 ಲಕ್ಷ ಲಾಭ, ಶೇ. 25 ಡಿವಿಡೆಂಟ್

Suddi Udaya

ಮಡಂತ್ಯಾರು: ಹೆದ್ದಾರಿಯ ರಸ್ತೆ ಕಾಮಗಾರಿ ಕಳಪೆ: ಸಾರ್ವಜನಿಕರ ಆಕ್ರೋಶ

Suddi Udaya

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya
error: Content is protected !!