26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎರಡನೇ ವಾತಿಕಾನ್ ಮಹಾಸಮ್ಮೇಳನದ ಸಂವಿಧಾನಿಕ ದಾಖಲೆಗಳ ಕುರಿತು ವಿಶೇಷ ಕಲಿಕಾ ಶಿಬಿರ

ಬೆಳ್ತಂಗಡಿ: ಕ್ರಿಸ್ತ ಯೇಸುವಿನ ಜನನದ 2025 ನೇ ವರ್ಷದ ಅಂಗವಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಜ್ಞಾನನಿಲಯ ಪಾಲನಾ ಕೇಂದ್ರದಲ್ಲಿ ವಿಶೇಷ ಕಲಿಕಾ ಶಿಬಿರ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಕೇರಳದ ಪಾಲಕ್ಕಾಡ್ ಧರ್ಮಪ್ರಾಂತ್ಯದ ಯಾಜಕರಾದ ವಂದನೀಯ ಡಾ. ಅರುಣ್ ಕಲಮತ್ತಂರವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

1965 ರಲ್ಲಿ ಕೊನೆಗೊಂಡ ಎರಡನೇ ವಾತಿಕಾನ್ ಮಹಾಸಮ್ಮೇಳನದ ಆಧುನಿಕ ಕಾಲದ ಧರ್ಮಸಭೆಯ ಸಂವಿಧಾನಿಕ ದಾಖಲೆಗಳ ಕುರಿತು ಚರ್ಚಿಸಲಾಯಿತು. ಧರ್ಮಸಭೆಯು ಸಮಾಜದಲ್ಲಿ ಒಳಿತಿನ, ಧಾರ್ಮಿಕತೆಯ ಕಾವಲುಗಾರನಾಗಿರಲು ಎರಡನೇ ವಾತಿಕಾನ್ ಮಹಾಸಮ್ಮೇಳನವು ನಮಗೆ ಆಹ್ವಾನ ನೀಡುತ್ತದೆ. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅತಿ ವಂದನೀಯ ಲಾರೆನ್ಸ್ ಮುಕ್ಕುಜ್ಹಿ ಯವರು ” ಆಧುನಿಕ ಲೋಕಕ್ಕೆ ದಾರಿದೀಪವಾಗಿರುವ ಎರಡನೇ ವಾತಿಕ್ಕಾನ್ ಮಹಾಸಮ್ಮೇಳನದ ದಾಖಲೆಗಳು ಆಳವಾಗಿ ತಿಳಿಯುವುದು ಅನಿವಾರ್ಯ ಹಾಗೂ ಲೋಕ ಸಮಾಧಾನಕ್ಕೆ ಅವಶ್ಯವಾದದ್ದು” ಎಂದರು.

ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು ಹಾಗೂ ಧರ್ಮ ಭಗಿನೀಯರು ಪ್ರಸ್ತುತ ಕಲಿಕಾ ಶಿಬಿರದಲ್ಲಿ ಭಾಗವಹಿಸಿದರು.

Related posts

ಮೈರೋಳ್ತಡ್ಕ -ಬಂದಾರು 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ. 2. 43 ಲಕ್ಷ ನಿವ್ವಳ ಲಾಭ.

Suddi Udaya

ಮಾ.22: ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya
error: Content is protected !!