April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಾವ್ಯ: ನೂಜಿಲೋಡಿಯಲ್ಲಿ ಮನೆಗೆ ನುಗ್ಗಿದ್ದ ಕಳ್ಳರು: ರೂ.2.15ಲಕ್ಷ ಮೌಲ್ಯದ ಸೊತ್ತುಗಳ ಕಳವು

ಸಾವ್ಯ : ಇಲ್ಲಿಯ ನೂಜಿಲೋಡಿ ಪ್ರಮೀಳಾ ರವರ ಮನೆಯಲ್ಲಿ ಯಾರೋ ಕಳ್ಳರು ನುಗ್ಗಿ ರೂ.2.15ಲಕ್ಷ ಮೌಲ್ಯದ ಸೊತ್ತುಗಳ ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.

ಸಾವ್ಯ ನಿವಾಸಿ ಶ್ರೀಮತಿ ಪ್ರಮೀಳಾ (37) ಎಂಬವರ ದೂರಿನಂತೆ, ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ನೂಜಿಲೋಡಿ ಎಂಬಲ್ಲಿ, ಪ್ರಮೀಳಾ ರವರು ವಾಸ್ತವ್ಯವಿರುವ ಮನೆಯ ಗೋದ್ರೇಜ್ ಕಪಾಟಿನಲ್ಲಿ ಇಟ್ಟಿದ್ದ, ತನ್ನ ಹಾಗೂ ಮಗಳ ಸುಮಾರು 43 ಗ್ರಾಂ. ತೂಕದ ಚಿನ್ನದ ಒಡವೆಗಳನ್ನು, ಮಾ. 26 ರಂದು ರಾತ್ರಿಯಿಂದ, ಮಾ. 29 ರಂದು ಬೆಳಿಗ್ಗಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ 2,15,000/- ರೂ. ಗಳಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 32/2024 ಕಲಂ 380 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ದ್ವಿತೀಯ ಪಿಯುಸಿ ಫಲಿತಾಂಶ: ಎಸ್‌ಡಿಎಂ ಪದವಿಪೂರ್ವ ಕಾಲೇಜಿಗೆ ಶೇ. 99.04% ಫಲಿತಾಂಶ

Suddi Udaya

ಲಾಯಿಲ ದೊಂಪದ ಬಲಿ ಉತ್ಸವ

Suddi Udaya

ಬದ್ಯಾರು ಜಂಕ್ಷನ್ ರಸ್ತೆಯಲ್ಲಿ ಸರಣಿ ಅಪಘಾತ, ನುಜ್ಜು ಗುಜ್ಜಾದ ವಾಹನಗಳು,ರಿಕ್ಷಾ ಡ್ರೈವರ್ ಗೆ ಗಾಯ

Suddi Udaya

ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯಸ್ಸು ಕಡ್ಡಾಯ ಶಿಕ್ಷಣ ಇಲಾಖೆ ಆದೇಶ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ರಾಷ್ಟ್ರಮಟ್ಟದ ನೃತ್ಯೋತ್ಸವ: ಧರಿತ್ರಿ ಭಿಡೆ ದ್ವಿತೀಯ

Suddi Udaya
error: Content is protected !!