ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ ಕಾರ್ಯಕ್ರಮವು ಕಾನರ್ಪ ಓಬಯ್ಯಗೌಡರ ಮನೆಯಂಗಳದಲ್ಲಿ ನಡೆಯಿತು.
ತುಳುನಾಡ ಜನಪದ ಕಲೆಯಲ್ಲಿ ಒಂದಾದ ಈ ಪುರುಷರ ಕುಣಿತವು ಈ ಪರಿಸರದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳಿಂದಲೂ ನಡೆಯುತ್ತಾ ಬರುತ್ತಿದೆ. ಸುಗ್ಗಿ ತಿಂಗಳ ಐದಾರು ದಿನಗಳಲ್ಲಿ ನಡೆಯುವ ಈ ಕುಣಿತವು ತನ್ನ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ದಿಮಿಸೋಲೆ ಹೇಳುತ್ತಾ ಭೇಟಿ ನೀಡಿ ಪುರುಷರ ಬಳಗವು ವಿವಿಧ ವೇಷಗಳನ್ನು ತೊಟ್ಟು ಮನೆಯ ಮುಂದೆ ತನ್ನ ಹಾಸ್ಯ ತುಣುಕುಗಳ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವು ಸುಗ್ಗಿ ತಿಂಗಳಲ್ಲಿ ಒಂದು ದಿನ ವಿವಿಧ ವೇಷ ಧರಿಸಿ ಕಾನರ್ಪ ಪರಿಸರದ ಮನೆ ಮನೆಗೆ ಭೇಟಿ ನೀಡಿ ಪುರುಷರ ಕುಣಿತ ಪ್ರದರ್ಶನ ನೀಡಲಾಯಿತು ಹಾಗೂ ಪುರುಷರ ಬಳಗದ ಸಮಿತಿ ನಿರ್ಣಯಿಸಿದಂತೆ ಕಾನರ್ಪ ಓಬಯ್ಯ ಗೌಡರ ಮನೆಯಂಗಳದಲ್ಲಿ ಪುರುಷರ ರಾಶಿ ಪೂಜೆ ನೆರವೇರಿಸಲಾಯಿತು.
ಈ ರಾಶಿ ಪೂಜಾ ಕಾರ್ಯಕ್ರಮದಲ್ಲಿ ಊರ-ಪರವೂರ ನೂರಾರು ಭಕ್ತರು ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಲೋಕಯ್ಯ ಗೌಡ ಜಾರಿಗೆದಡಿ, ಸಂಜೀವ ಗೌಡ ಕೋಡಿಯೆಲ್, ಜನಾರ್ಧನ ಕಾನರ್ಪ, ರಾಘವೇಂದ್ರ ಭಟ್ ಕೋಡಿ, ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಓಬಯ್ಯಗೌಡ, ಸುರೇಶ್ ಮಾಲ್ನ, ರಾಜೇಶ್ ಕೋಡಿ, ಆನಂದ ಮುಳಿಹಿತ್ಲು, ಚೆನ್ನ ಕೇಶವ, ಗುರುಪ್ರಸಾದ್ ಕಾನರ್ಪ, ಸುದರ್ಶನ ಕನಪ್ಪಾಡಿ, ಜಾರಪ್ಪ ಗೌಡ ಬೊಟ್ಟು, ಸುದರ್ಶನ ಶೀರಬೆಟ್ಟು, ರವೀಂದ್ರ ಪೂಜಾರಿ, ನೀಲಯ್ಯ ಗೌಡ ಮಾಲ್ನ, ಜಗದೀಶ ಉಂಗಿಲಪಾದೆ, ಉಮೇಶ್ ಕೋಡಿ, ಕಮಲಾಕ್ಷ ಕೋಡಿ, ಎಲ್ಯಣ್ಣ ಗೌಡ ಪೆಲತ್ತಡಿ, ರಾಮಚಂದ್ರ ಪಣಿಕ್ಕಲ್, ಸುರೇಶ್ ಹಿಮರಡ್ಡ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.