ಲಾಯಿಲ: ಶ್ರೀ ಕ್ಷೇತ್ರ ಪಿಲಿಪಂಜರ ಶ್ರೀ ಉಳ್ಳಾಲ್ತಿ, ಶ್ರೀ ಉಳ್ಳಾಕ್ಲು , ಮೂಲ ಮೈಸಂದಾಯ, ಸ್ಥಳ ದೈವ ಪಂಜುರ್ಲಿ ಹಾಗೂ ದೈವರಾಜೆ ಗುಳಿಗ ದೈವಗಳ ಸಾನಿಧ್ಯ ಇಲ್ಲಿಯ ಪ್ರತಿಷ್ಠಾ ದಿನ ಮತ್ತು ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಡೆಶಿವಾಲಯ ವೇದಮೂರ್ತ ಪಚ್ಚಾಡಿಬೈಲು ಪಿ. ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಮಾ.31ರಂದು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ತೋರಣ ಮುಹೂರ್ತ, ದೇವತಾ ಪ್ರಾರ್ಥನೆ, ಸ್ವಸ್ತಿ ಪಂಚಗವ್ಯ ಪುಣ್ಯಾಹವಾಚನ, ಗಣಪತಿಹೋಮ, ಶ್ರೀ ದೈವಗಳಿಗೆ ನವಕ ಕಲಶಾರಾಧನೆ, ನಂತರ ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಪರ್ವಾದಿ ಸೇವೆಗಳು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಉಳ್ಳಾಲ್ತಿ, ಶ್ರೀ ಉಳ್ಳಾಕ್ಲು , ಮೂಲ ಮೈಸಂದಾಯ, ಸ್ಥಳ ದೈವ ಪಂಜುರ್ಲಿ ಹಾಗೂ ದೈವರಾಜೆ ಗುಳಿಗ
ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಗೌರವ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯರು. ಅಧ್ಯಕ್ಷ ಸುರೇಶ್ ಬರಮೇಲು, ಪ್ರಧಾನ ಕಾರ್ಯದರ್ಶಿ ಸುಧಾಕರ್ ಬಿ ಎಲ್, ಕಾರ್ಯದರ್ಶಿ ಪುಷ್ಪರಾಜ್ ಲಾಯಿಲ, ಕೋಶಾಧಿಕಾರಿ ಲಕ್ಷ್ಮಣ್ ಜಿ.ಎನ್, ಉಪಾಧ್ಯಕ್ಷರುಗಳಾದ ಸೀತಾರಾಮ ಹೆಗ್ಡೆ, ಶ್ರೀಮತಿ ಲಕ್ಷ್ಮಿ ರವಿಕುಮಾರ್, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಉಷಾ ಗೋಕುಲ್ ದಾಸ್, ಅನಿಲ್ ಕಕ್ಕೆನಾ,
ವಿವಿಧ ಸಮಿತಿಯ ಸಂಚಾಲಕರು ಮತ್ತು ಸರ್ವ ಸದಸ್ಯರು ಹಾಒಗೂ ಊರವರು ಉಪಸ್ಥಿತರಿದ್ದರು.