ಬೆಳ್ತಂಗಡಿ : ಶ್ರಿ.ಧ.ಮಂ. ಐಟಿಐ ಕಾಲೇಜು ವೇಣೂರಿನಲ್ಲಿ ಮಾ.27 ರಂದು ದಕ್ಷಿಣ ಕನ್ನಡ ಜಿಲ್ಲಾ & ಬೆಳ್ತಂಗಡಿ ತಾ. ಸ್ವೀಪ್ ಸಮಿತಿಯ ಸಹಯೋಗದಲ್ಲಿ 2024 ಲೋಕ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯುವ ಮತ್ತು ಭವಿಷ್ಯದ ಮತದಾರರಿಗೆ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾ. ಪಂ.ನ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಾ.ಸ್ವೀಪ್ ಸಮಿತಿಯ ಅಧ್ಯಕ್ಷರು ಶ್ರೀ ವೈಜಣ್ಣ , ಕಾಲೇಜಿನ ಪ್ರಾಂಶುಪಾಲರಾದ ವಿಶ್ವೇಶ್ವರ ಪ್ರಸಾದ್ , ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಮಾಸ್ಟರ್ ಟ್ರೈನರ್ ಯೋಗೇಶ ಹೆಚ್.ಆರ್ ,
ತಾ.ಪಂ.ಅಧೀಕ್ಷಕರಾದ ಡಿ. ಪ್ರಶಾಂತ್ ಹಾಗೂ ಬಹು ಮುಖ್ಯವಾಗಿ 320 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಗೃತಿ ಕಾರ್ಯಕ್ರಮದಲ್ಲಿ “ಯುವ ಮತದಾರರು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ನೈತಿಕ ಮತದಾನಕ್ಕೆ ಪ್ರಾಮುಖ್ಯತೆ ಕೊಡಬೇಕು. ಜೊತೆಯಲ್ಲಿ ಏ.26 ರ ದಿನ ಮನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿದ್ದರೂ /ಮದುವೆ ಇತರೆ ಸಂಭ್ರಮದಲ್ಲಿ ಮುಳುಗಿದ್ದರೂ ದೇಶಕ್ಕಾಗಿ, ನಾಡಿಗಾಗಿ, ನಮ್ಮ ಜಿಲ್ಲೆ ಹಾಗೂ ತಾಲೂಕಿನ ಹಿತಕ್ಕಾಗಿ ಅರ್ಥಾತ್ ನಮ್ಮೆಲ್ಲರ ಭವಿಷ್ಯದ ಹಿತಕ್ಕಾಗಿ ಅರ್ಧ/ಒಂದು ಗಂಟೆಯ ಸಮಯವನ್ನು ಮತದಾನ ಮಾಡಿ ಬರಲು ವಿನಿಯೋಗಿಸಬೇಕು” ಎಂದು ಜಿಲ್ಲಾ ಮಟ್ಟದ ಸ್ವೀಪ್ ತರಬೇತುದಾರ ಯೋಗೇಶ ಹೆಚ್.ಆರ್ ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತಾ ತಿಳಿಸಿದರು.