ಕೊಕ್ಕಡ: ಸೌತಡ್ಕ ಗಣೇಶ ಕಲಾಮಂದಿರದಲ್ಲಿ ಜರುಗಿದ ಚುನಾವಣಾ ಆಯೋಗದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರು ಮಾಶಾಸನ ಹಾಗೂ ಹಕ್ಕುಪತ್ರ ನೀಡದಿರುವುದಕ್ಕೆ ಹಾಗೂ ಅಧಿಕಾರಿಗಳ ವೈಫಲ್ಯದ ಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಬಹಿಷ್ಕರಿಸಿದರು.
ಸಭೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರ ಸುಮಾರು 400 ಜನರಿಗೆ ಮಾಶಸನ ಸ್ಥಗಿತಗೊಂಡಿದ್ದು ಯುಐಡಿ ಕಾರ್ಡ್ ದೊರೆಯದೆ ಇರುವುದರಿಂದ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಸಕ್ರಮ ವಿತರಿಸದೆ ಎಂಡೋಸಲ್ಫಾನ್ ಸಂತ್ರಸ್ಥರು ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದರು.
ನಂತರ ತುಕ್ರಪ್ಪ ಶೆಟ್ಟಿಯರವರ ದರೋಡೆಯ ಸಂದರ್ಭದಲ್ಲಿ ಅವರಿಗೆ ಬಂದೂಕನ್ನು ಇರಿಸಿಕೊಳ್ಳಲು ಮನೆಯಲ್ಲಿ ವಿನಾಯಿತಿಯನ್ನು ನೀಡಿದಂತೆ ಈ ಸರಿಯೂ ಅವರಿಗೆ ವಿನಾಯತಿ ನೀಡಬೇಕೆಂದು ಕೇಳಿಕೊಂಡಿದ್ದರು ವಿನಾಯತಿ ನೀಡದಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದರು. ಮತ್ತು 86 ವರ್ಷದ ದಾಟಿದ ಮತ್ತು ವಿಕಲಚೇತನರರಿಗೆ ಮನೆಯಿಂದಲೇ ಓಟನ್ನು ಹಾಕುವುದರಲ್ಲಿ ಅವಕಾಶ ನೀಡದಿರುವುದರ ಕುರಿತು ಅಕ್ರೋಶ ವ್ಯಕ್ತಪಡಿಸಿದರು.
ಎಂಡೋಸಲ್ಫಾನ್ ಹೋರಾಟಗಾರರು ನಮ್ಮ ಹೋರಾಟ ಚುನಾವಣಾ ಬಹಿಷ್ಕಾರವು ಪ್ರತಿನಿಧಿಗಳ ವಿರುದ್ಧ ಅಲ್ಲ ದ.ಕ ಜಿಲ್ಲಾಡಳಿತ ವಿರುದ್ಧ ಆಗಿರುತ್ತದೆ. ಎಂಡೋಸಲ್ಫಾನ್ ರಿಗೆ ಮಾಶಾಸನ ಹಾಗೂ ಹಕ್ಕುಪತ್ರಗಳು ಇತ್ಯಾದಿಗಳು ನೀಡದಿರುವುದಕ್ಕೆ ಇದು ಅಧಿಕಾರ ವೈಫಲ್ಯವಾಗಿರುವುದರಿಂದ ಅಧಿಕಾರಿಗಳ ವೈಫಲ್ಯದ ಕಾರಣವಾಗಿದೆ ಎಂಡೋಸಲ್ಫಾನ್ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಕೆಂಗುಡೇಲು ಎಂದರು.
ಬೆಂಗಳೂರು ಚುನಾವಣಾ ಆಯೋಗದ ನೋಡೆಲ್ ಅಧಿಕಾರಿ ವಸ್ತ್ರದ್ ಮಾತನಾಡಿ ಎಂಡೋಸಲ್ಫಾನರ ಮಾಶಾಸನ ಕುರಿತು ಬೆಂಗಳೂರು ಹಾಗೂ ಮಂಗಳೂರು ಮಟ್ಟದಲ್ಲಿ ಸಂಪರ್ಕಿಸಿ ನ್ಯಾಯ ಕೊಡಿಸುವುದಾಗಿ ಹಾಗೂ ನಿಯಾಮಾನುಸಾರ ಯಾರಿಗೆ ಓಟು ಹಾಕಲು ಆಗುವುದಿಲ್ಲ ಅವರಿಗೆ ಮನೆಯಲ್ಲಿಯೇ ಕಲ್ಪಿಸಿಕೊಡುವಂತಹ ಭರವಸೆ ಕೊಟ್ಟರು. ನಂತರ ಚುನಾವಣಾ ಬಹಿಷ್ಕಾರ ಮಾಡದಂತೆ ಅವರು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ವೈಜಣ್ಣ , ತಾ.ಪಂ. ಅಧೀಕ್ಷಕ ಪ್ರಶಾಂತ್ ಡಿ., ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿ ಪ್ರಮೀಳಾ ರಾವ್ ಉಪಸ್ಥಿತರಿದ್ದರು.