27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ

ಉಜಿರೆ: ಕೌಶಲ್ಯದ ಜೊತೆಗೆ ಜೀವನದ ಅನಭವವನ್ನು ಪಡೆದಾಗ ಉತ್ತಮವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ರುಡ್‌ಸೆಟ್ ಸಂಸ್ಥೆಯಲ್ಲಿ ಕೌಶಲ್ಯ ಮಾತ್ರವಲ್ಲದೇ ಜೀವನದ ಮೌಲ್ಯಗಳನ್ನು ಕೂಡ ಕಲಿಸಿಕೊಡುತ್ತಾರೆ. ಇಲ್ಲಿಂದ ಹೋಗುವಾಗ ಜೀವನದ ಅನುಭವವನ್ನು ಜೊತೆಗೆ ಕೊಂಡುಹೋಗಿ. ಪ್ರಕೃತಿಗೆ ನಮ್ಮ ಅಗತ್ಯ ಇಲ್ಲ ಆದರೆ ನಮಗೆ ಪ್ರಕೃತಿಯ ಅಗತ್ಯ ಇದೆ. ಆದ್ದರಿಂದ ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಿ. ರುಡ್‌ಸೆಟ್ ಸಂಸ್ಥೆಯಲ್ಲಿ ಕಲಿತ ಎಲ್ಲಾ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿರ್ಧಾರ ಮಾಡಿ, ಗ್ರಾಹಕರೊಂದಿಗೆ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಿಮ್ಮ ಉದ್ಯಮವನ್ನು ಬೆಳೆಸಿಕೊಳ್ಳಿ, ಆರ್ಥಿಕವಾಗಿ ಸಬಲರಾಗಿ, ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶಗಳಲ್ಲಿ ನಮ್ಮ ದೇಶವೂ ಒಂದು, ಈ ಯುವಕರಿಗೆ ಉದ್ಯೋಗವನ್ನು ಕೊಟ್ಟರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ರುಡ್‌ಸೆಟ್ ಸಂಸ್ಥೆಯಿಂದ ಅನೇಕ ನಿರುದ್ಯೋಗಿಗಳು ಸ್ವ ಉದ್ಯೋಗವನ್ನು ಕೈಕೊಂಡು ಸ್ವಾವಲಂಬಿಗಳಾಗುವುದು ಅಲ್ಲದೇ ಅನೇಕರಿಗೆ ಉದ್ಯೋಗ ಕೊಡುವವರಾಗಿದ್ದಾರೆ ಎಂದು ಧರ್ಮೋತ್ಥಾನ ಟ್ರಸ್ಟ್, ಧರ್ಮಸ್ಥಳ ಇದರ ಕಾರ್ಯದರ್ಶಿಗಳು ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ಭಾಗವಹಿಸಿ ಶಿಭಿರಾರ್ಥೀಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರರವರು ಅದ್ಯಕ್ಷತೆ ವಹಿಸಿದ್ದರು, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್ ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕ ಕರಣಾಕರ್ ಜೈನ್ ರವರು ವಂದಿಸಿದರು. 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 25 ಅಭ್ಯರ್ಥಿಗಳು ಭಾಗವಹಿಸಿದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Related posts

ಗಾಯಕಿ ನಂದಶ್ರೀ ಸಂಗೀತ ಪರೀಕ್ಷೆಯಲ್ಲಿ ಅದ್ಭುತ ಸಾಧನೆ

Suddi Udaya

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ

Suddi Udaya

ನಾವರ ದೇವಸ್ಥಾನದ ಬಳಿ ರಬ್ಬರ್ ತೋಟಕ್ಕೆ ಬೆಂಕಿ

Suddi Udaya

ಗುರುವಾಯನಕೆರೆ ಅಯ್ಯಪ್ಪ ಭಕ್ತರ ಮಹಾಸಂಗಮ ಸಮಾವೇಶದಲ್ಲಿ ಸಂಪತ್ ಬಿ. ಸುವರ್ಣ ರವರಿಂದ 7 ಹಕ್ಕೋತ್ತಾಯಗಳ ಮಂಡನೆ

Suddi Udaya

ಚಂದ್ರಯಾನ-3 ರ ಯಶಸ್ಸು ರಾಷ್ಟ್ರದ ಇತಿಹಾಸದಲ್ಲಿ ಹೊಸ ಪುಟಗಳನ್ನು ತೆರೆದಿದೆ: ಪ್ರತಾಪ್ ಸಿಂಹ ನಾಯಕ್

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!