28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ : ಅಡಿಕೆ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು: ರೂ. 1.35ಲಕ್ಷ ಮೌಲ್ಯದ ಅಡಿಕೆ ಕಳ್ಳತನ

ಬೆಳ್ತಂಗಡಿ: ತಣ್ಣೀರುಪಂತದಲ್ಲಿ ಮನೆ ಸಮೀಪದ ಅಡಿಕೆ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ರೂ. 1.35ಲಕ್ಷ ಮೌಲ್ಯದ ಅಡಿಕೆ ಕಳ್ಳತನ ಮಾಡಿದ ಘಟನೆ ಸಂಭವಿಸಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ತಣ್ಣೀರುಪಂತ ನಿವಾಸಿ ಅಬ್ದುಲ್ ಹಕ್ಕೀಂ ಈ ಬಗ್ಗೆ ದೂರು ನೀಡಿದ್ದು ಎ.2ರಂದು ಸಂಜೆಯ ವೇಳೆ ಸುಲಿಯದ ಅಡಿಕೆಯನ್ನು 75 ಗೋಣಿ ಚೀಲಗಳಲ್ಲಿ ತುಂಬಿಸಿ ಗೋದಾಮಿನಲ್ಲಿ ಇಟ್ಟು ಬೀಗ ಹಾಕಿದ್ದರು. ಎ. 3 ರಂದು ಬೆಳಿಗ್ಗೆ ನೋಡಿದಾಗ ಗೋದಾಮಿನ ಬೀಗ ಬಾಗಿಲು ತುಂಡಾಗಿ ಬಿದ್ದಿರುವುದು ಕಂಡು ಬಂದಿದ್ದು ಪರಿಶೀಲಿಸಿದಾಗ ಅಲ್ಲಿ ಇರಿಸಲಾಗಿದ್ದ 25ಅಡಿಕೆ ಚೀಲಗಳನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಕಳ್ಳತನವಾಗಿರುವ ಅಡಿಕೆಯ ಒಟ್ಟು ಮೌಲ್ಯ 1,35,000 ಎಂದು ಅಂದಾಜಿಸಲಾಗಿದೆ.


ಅಡಿಕೆ ಗೋದಾಮಿನ ಬಗ್ಗೆ ಮಾಹಿತಿಯಿರುವ ಸ್ಥಳೀಯರ ಸಹಕಾರದೊಂದಿಗೆ ಈ ಕಳ್ಳತನ ನಡೆದಿದೆ ಎಂದು ಅನುಮಾನಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ನೂತನ ಸಮಿತಿ ಪದಗ್ರಹಣ

Suddi Udaya

ಉಜಿರೆ ಎಸ್ ಡಿ ಎಂ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ

Suddi Udaya

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆ ರವರಿಗೆ ಪಿಎಚ್ ಡಿ ಪದವಿ

Suddi Udaya

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ದ್ವಿಚಕ್ರ ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟು ಮಹಿಳೆಗೆ ಗಂಭೀರ ಗಾಯ: ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya
error: Content is protected !!