ಪಡಂಗಡಿ :ಪೆರಣಮಂಜ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದ ಜಾತ್ರೋತ್ಸವವು ಎ.13ರಿಂದ 15 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಎ.13 ಮೇಷ ಸಂಕ್ರಮಣದಂದು ಬೆಳಿಗ್ಗೆ ಗಂಟೆ 9.00ಕ್ಕೆ ಪ್ರಶ್ನೆ ಚಿಂತನೆ (ಸಾರಿ ಹಾಕುವುದು), ಗೊನೆ ಮುಹೂರ್ತ, ನಾಗ ದೇವರಿಗೆ ನವಕ ಪ್ರಧಾನ ತಂಬಿಲ, ಪ್ರಸನ್ನ ಪೂಜೆ ಮತ್ತು ಮೂಜಿಲ್ನಾಯ ಬ್ರಹ್ಮ ದೇವರಿಗೆ ನವಕ ಪ್ರಧಾನ, ಪ್ರಸನ್ನ ಪೂಜೆ. ಮಧ್ಯಾಹ್ನ ಗಂಟೆ 3.30ಕ್ಕೆ ಗ್ರಾಮಸ್ಥರಿಂದ ಅರ್ಪಿತವಾದ ಹೊರೆಕಾಣಿಕೆ ಸ್ವೀಕರಿಸಿ, ಉಗ್ರಾಣ ತುಂಬಿಸುವುದು. ಸಂಜೆ ಗಂಟೆ 4.30ಕ್ಕೆ ಚೆಂಡು, ರಾತ್ರಿ ಗಂಟೆ 8.00ಕ್ಕೆ ಧ್ವಜಾರೋಹಣ, ತಂಬಿಲ ಬಲಿ ಉತ್ಸವ, ಜಾಲಾಟ
ಎ.14ರಂದು ಸಂಜೆ ಗಂಟೆ 5.30ಕ್ಕೆ ನಡಿಬೆಟ್ಟು ಗುತ್ತಿನಿಂದ ಭಂಡಾರ ಹೊರಟು ಕ್ಷೇತ್ರಕ್ಕೆ ಬರುವುದು. ರಾತ್ರಿ ಗಂಟೆ 7.00ರಿಂದ 8.00ರ ವರೆಗೆ ಮಲ್ಲಿಪಾಡಿ ಶ್ರೀ ಸದಾಶಿವ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ, ರಾತ್ರಿ ಗಂಟೆ 7.30ರಿಂದ ಪೂಜೆ, ಬಲಿ ಉತ್ಸವ, ರಾತ್ರಿ ಗಂಟೆ 9.30ರಿಂದ ಮಹಾ ದೈವ ಮೂಜಿಲ್ನಾಯ, ಪಿಲಿಚಾಮುಂಡಿ, ಭೈರವ, ಪಂಜುರ್ಲಿ ನೇಮ, ನುಡಿಕಟ್ಟು, ಆಹಾರ ಬಲಿ, ಭಂಡಾರ ನಿರ್ಗಮನ
ಎ. 15ರಂದು ಬೆಳಿಗ್ಗೆ ಗಂಟೆ 6.00ಕ್ಕೆ ಅವಕೃತ, ಧ್ವಜಾವರೋಹಣ, ಸಂಪ್ರೋಕ್ಷಣೆ ಕಲಶ, ಪ್ರಸನ್ನ ಪೂಜೆ ನಡೆಯಲಿದೆ