24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ: ದರ್ಶನ ಬಲಿ, ಬಟ್ಟಲು ಕಾಣಿಕೆ

ಬಂದಾರು: ಇಲ್ಲಿಯ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ವಾಸುದೇವ ತಂತ್ರಿಯವರ ಹಿರಿತನದಲ್ಲಿ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಎ.2ರಿಂದ ಆರಂಭಗೊಂಡು ಎ.10ರ ತನಕ ವಿಜೃಂಭಣೆಯಿಂದ ನಡೆಯಲಿದೆ

ಇಂದು (ಎ.8) ಬೆಳಿಗ್ಗೆ ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಖಂಡ, ಅರ್ಚಕರು, ಸದಾಶಿವ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಯಕ್ಷಗಾನ ಸಮಿತಿಯ ಅಧ್ಯಕ್ಷರು, ಸದಸ್ಯರು, ಸದಾಶಿವ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ ಹಾಗೂ ಪ್ರಗತಿಬಂಧು ಒಕ್ಕೂಟ ಮೈರೋಳಡ್ಕ ಬಂದಾರು ಅಧ್ಯಕ್ಷ, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಸಂಜೆ ಭಜನೆ, ರಾತ್ರಿ ರಕೇಶ್ವರಿ ದೈವದ ನೇಮೋತ್ಸವ, ರಥೋತ್ಸವ ಮತ್ತು ಶಯನೋತ್ಸವ ನಡೆಯಲಿದೆ .

Related posts

ಕೊಕ್ರಾಡಿ : ಗೋಳಿಯಂಗಡಿಯಲ್ಲಿ ಸ್ಕಿಡ್‌ ಆಗಿ ಬಿದ್ದ ಬೈಕ್ : ಸವಾರರಿಗೆ ಗಾಯ

Suddi Udaya

ಗುರುವಾಯನಕೆರೆ: ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ಅವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ರೂ.50 ಲಕ್ಷ ದೇಣಿಗೆ

Suddi Udaya

ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ

Suddi Udaya

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗದ ಮಹಾಸಭೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣಾ ತರಬೇತಿ

Suddi Udaya
error: Content is protected !!