ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ” ಉದ್ಘಾಟನೆ

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ಪ್ರಸ್ತುತಪಡಿಸುವ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್‌ ಇವರ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ಚಿಲಿಪಿಲಿ -2024 ಉಜಿರೆ ಅನುಗ್ರಹ ಪ್ರೈಮರಿ ಶಾಲೆ ಸಭಾಂಗಣದಲ್ಲಿ ಎ.10 ರಿಂದ 19 ರ ವರೆಗೆ ನಡೆಯಲಿದೆ

ಕಾರ್ಯಕ್ರಮವನ್ನು ಅನುಗ್ರಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವ.ಫಾ.ಜೇಮ್ಸ್ ಡಿಸೋಜಾ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು..

ಮುಖ್ಯ ಅತಿಥಿಗಳಾಗಿ ಅಗಮಿಸಿದ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ವ.ಫಾ.ವಿಜಯ್ ಲೋಬೋ ರವರು ಬೇಸಿಗೆ ಶಿಬಿರಕ್ಕೆ ಆಗಮಿಸಿದ ಮಕ್ಕಳಿಗೆ ಶುಭಹಾರೈಸಿದರು.

ಮಹಿಳಾ ಮಂಡಲದ ಸದಸ್ಯೆ ಮಮತ ಪ್ರಾರ್ಥಿಸಿ, ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಸ್ವಾಗತಿಸಿದರು. ಭವ್ಯಶ್ರೀ ನಿರೂಪಿಸಿ, ಗಾಯತ್ರಿ ಶ್ರೀಧರ್ ರವರ ಧನ್ಯವಾದವಿತ್ತರು. ಮಹಿಳಾ ಮಂಡಲದ ಸದಸ್ಯರು, ಶಿಬಿರಾರ್ಥಿಗಳು, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.

Related posts

ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿ ಮೋಹಿತ್ ಏಷ್ಯನ್ ಗೇಮ್ಸ್ ಗೆ ಆಯ್ಕೆ

Suddi Udaya

ಗುರುವಾಯನಕೆರೆ: ಶ್ರೀ ಶಿವಂ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶೇ.10-50 ವಿಶೇಷ ಆಫರ್

Suddi Udaya

ಅಂಡಿಂಜೆ: ನೆಲ್ಲಿಂಗೇರಿ ನಿವಾಸಿ ವಿಶ್ವನಾಥ ಭಂಡಾರಿ ನಿಧನ

Suddi Udaya

ನಾಲ್ಕೂರು: ಹೃದಯಾಘಾತದಿಂದ ಜಗದೀಶ್ ಪೂಜಾರಿ ಕುದ್ರೋಟ್ಟು ನಿಧನ

Suddi Udaya

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ವಿದ್ಯಾರ್ಥಿನಿ ಸಂಜನಾ

Suddi Udaya
error: Content is protected !!