ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ಜಿನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್ ಉದ್ಘಾಟನೆ

ವೇಣೂರು: ಆರಂಬೋಡಿಯಲ್ಲಿರುವ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟೋಟಲ್ ಕ್ಲೀನ್ ಲ್ಯಾಂಡ್ರಿ ಸರ್ವಿಸ್( ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್) ಬೃಹತ್ ಘಟಕದ ಶಾಖೆ ವೇಣೂರು ಮುಖ್ಯ ರಸ್ತೆಯ ಜಿನಪ್ರಸಾದ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ಮೇ 20ರಂದು ಶುಭಾರಂಭಗೊಂಡಿತು.

ವೇಣೂರಿನ ನಮನ ಕ್ಲಿನಿಕ್‌ನ ಜನಪ್ರಿಯ ವೈದ್ಯರಾದ ಡಾ. ಶಾಂತಿಪ್ರಸಾದ್‌ರವರು ಶಾಖೆಯನ್ನು ಉದ್ಘಾಟಿಸಿ, ಈ ಸೇವೆ ನಮ್ಮ ಊರಿಗೆ ಕಲ್ಪಿಸಿದ ಮಾಲಕರನ್ನು ಅಭಿನಂದಿಸಿ ಶುಭಹಾರೈಸಿದರು.
ವಕ್ಕಾಡಿಗೋಳಿ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ನಿಯಾಝ್ ಫೈಝಿಯವರು ಪ್ರಾರ್ಥನೆ ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ಜೈನ್, ರಿಯಾಂತ್, ವಿ.ಕೆ ಮಹಮ್ಮದ್ ಅಲ್ತಾಫ್, ಖಾಲಿದ್ ಕಲ್ಲಡ್ಕ, ಹೆಚ್.ಎ ರಹೀಮಾನ್ ವಕ್ಕಾಡಿಗೋಳಿ, ಸದಾಶಿವ ಭಂಡಾರಿ, ಹರೀಶ್ ಕುಮಾರ್ ಪೊಕ್ಕಿ, ಹರೀಶ್ ನಾಯಕ್, ದಯಾನಂದ ಹೆಗ್ಡೆ, ಆದಂ ನಡ್ತಿಕಲ್, ಪ್ರಶಾಂತ್ ನಾಯಕ್, ಅಂಡಿಂಜೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶಿವಶಂಕರ್ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಘಟಕದ ಮಾಲಕರಾದ ಎಸ್. ಮಹಮ್ಮದ್ ಅವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿ, ಎಲ್ಲರ ಸಹಕಾರ ಕೋರಿದರು. ಪತ್ರಕರ್ತ ಹೆಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು. ಅಕ್ಬರ್ ವೇಣೂರು ವಂದಿಸಿದರು.

Related posts

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ

Suddi Udaya

ಇಂದು(ಸೆ.2): ಶ್ರೀ ಕ್ಷೇತ್ರ ಓಡೀಲು ನಲ್ಲಿ ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಕಾರ್ಯಕ್ರಮ

Suddi Udaya

ಆ.31: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ-2024

Suddi Udaya

ಶಿರ್ಲಾಲು ಬಳಂಜ ಕಾಡು ಕೋಣಗಳ ಸಂಚಾರ

Suddi Udaya
error: Content is protected !!