ಎಕ್ಸೆಲ್ ಕಾಲೇಜಿನಲ್ಲಿ ಪ.ಪೂ. ವಿಜ್ಞಾನ ವಿಭಾಗದ ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.

ಅನುಪ್ರಿಯ 594 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5 ನೆಯ ಸ್ಥಾನ, ಆಶ್ರಿತ ಜೈನ್ 592 ಅಂಕಗಳೊಂದಿಗೆ ತಾಲೂಕಿಗೆ ದ್ವಿತೀಯ, ರಾಜ್ಯಕ್ಕೆ ಅಂಕಗಳೊಂದಿಗೆ ಏಳನೆಯ ಸ್ಥಾನ, ಧನ್ವಿ ಭಟ್ , ತನ್ಮಯಿ ಶ್ಯಾನುಭಾಗ್ , ಕೃತ್ತಿಕಾ ಸಿ ಬಿ ತಲಾ 591 ಅಂಕಗಳೊಂದಿಗೆ ರಾಜ್ಯಕ್ಕೆ 8 ನೆಯ ಸ್ಥಾನ,ತಾಲೂಕಿಗೆ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ವೈಭವ ಕೆ ಎ, ಸಂಜನಾ ಕೆ ಆರ್ ತಲಾ 589 ಅಂಕಗಳೊಂದಿಗೆ ರಾಜ್ಯಕ್ಕೆ 10 ನೆಯ ಸ್ಥಾನ ಪಡೆದು ಕೊಂಡಿದ್ದಾರೆ.

ಪರೀಕ್ಷೆ ಬರೆದ 455 ವಿದ್ಯಾರ್ಥಿಗಳ ಪೈಕಿ 359 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 96 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಪೂರ್ವ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್ ಬಿ.ಎಮ್,ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ನಾವೂರು ಕ್ಲಿನಿಕ್ ನ ಖ್ಯಾತ ವೈದ್ಯರಾದ ಡಾ.ಪ್ರದೀಪ್ ನಾವೂರು, ಕಿಟ್ಟೆಲ್ ಕಾಲೇಜಿನ ಪ್ರಾಂಶುಪಾಲ ವಿಠಲ ಅಬೂರ,ತಾಲೂಕಿಗೆ ಪ್ರಥಮ ಹಾಗೂ ದ್ವೀತಿಯ ಸ್ಥಾನಿಯಾದ ಅನುಪ್ರಿಯಾ, ಆಶಿತಾ ಜೈನ್ ಹೆತ್ತವರಾದ ಶ್ರೀಮತಿ ಮತ್ತು ಚಂದ್ರಶೇಖರ್ ಪಿ.ಕೆ ಬಳಂಜ, ಶ್ರೀಮತಿ ಮತ್ತು ಅಜಿತ್ ಕುಮಾರ್ ಕೊಕ್ರಾಡಿ ಉಪಸ್ಥಿತರಿದ್ದರು.

Leave a Comment

error: Content is protected !!