March 7, 2026
ಗ್ರಾಮಾಂತರ ಸುದ್ದಿ

ಮತದಾನ ಜಾಗೃತಿಗಾಗಿ ಸೆಲ್ಪಿ ಪಾಯಿಂಟ್’ನಾನು ಮತದಾನ ಮಾಡುವೆ ನೀವು ಮಾಡಿ’ ಸಂದೇಶ ಸಾರಿದ ತಾ.ಪಂ.‌ಕಾಯ೯ನಿವಾ೯ಹಣಾಧಿಕಾರಿ ಹಾಗೂ ಸಿಬ್ಬಂದಿಗಳು

ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಶೇ 100 ಮತದಾನಕ್ಕಾಗಿ ಚುನಾವಣೆಗೆ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗದ ಸೂಚನೆಯಂತೆ ಬೆಳ್ತಂಗಡಿ ತಾಲೂಕಿನಲ್ಲಿ ಸ್ವೀಪ್ ಸಮಿತಿಯ ಅಧಿಕಾರಿ ಹಾಗೂ ತಾ.ಪಂ ಕಾಯ೯ನಿವಾ೯ಹಣಾಧಿಕಾರಿ ವೈಜಣ್ಣ ಹಾಗೂ ಸಿಬ್ಬಂದಿಗಳು
ಹರಸಾಹಸ ನಡೆಸುತ್ತಿದ್ದಾರೆ.

ಬಾರಿ ಶೇ.100 ಮತದಾನದ ಗುರಿಯನ್ನು ಇಟ್ಟುಕೊಂಡು ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿಯು ಸರಕಾರಿ, ಅರೆಸರ್ಕಾರಿ, ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಪೋಸ್ಟರ್ ಅಭಿಯಾನ, ಮತದಾನ ಜಾಗೃತಿ ಕಾರ್ಯಕ್ರಮ ವಿವಿದೆಡೆ ನಡೆಸುತ್ತಿದೆ.
‌ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ಶಿಶಿಲ ಶಿಶಿಲೇಶ್ವರ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಬೆಳ್ತಂಗಡಿ ಬಸ್ ನಿಲ್ದಾಣಗಳಲ್ಲಿ ಭಕ್ತರ ಹಾಗೂ ಪ್ರವಾಸಿಗರಲ್ಲಿ ಮತದಾನ ಜಾಗೃತಿಗಾಗಿ ಸೆಲ್ಪಿ ಪಾಯಿಂಟ್ ಅಳವಡಿಸಲಾಗುತ್ತದೆ. ‘ನಾನು ಮತದಾನ ಮಾಡುವೆ ನೀವು ಮಾಡಿ’ ಎಂದು ಮತದಾರರಿಗೆ ಸಂದೇಶ ಸಾರುವುದು ಸೆಲ್ಪಿ ಪಾಯಿಂಟ್‌ನ ಉದ್ದೇಶವಾಗಿದೆ.
ಸ್ವೀಪ್ ಸಮಿತಿಯ ವೈಜಯಣ್ಣ ಸೇರಿದಂತೆ ತಾಲೂಕು ಪಂಚಾಯತನ ಎಲ್ಲಾ ಸಿಬ್ಬಂದಿಗಳು ಈ ಸೆಲ್ಪಿ ಪಾಯಿಂಟ್ ನಲ್ಲಿ ಸಂಭ್ರಮಿಸಿದರು.

Related posts

ಉಜಿರೆ ಎಸ್. ಡಿ. ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

Suddi Udaya

ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಬೆಳ್ತಂಗಡಿ ಸಂಚಾರಿ ಪೊಲೀಸರು

Suddi Udaya

ಬೆಳ್ತಂಗಡಿ: ಡಾ. ಸುಶ್ಮಿತಾ ಸಿ ಎಚ್ ರವರಿಗೆ ಪಿಹೆಚ್ ಡಿ ಪದವಿ

Suddi Udaya

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ

Suddi Udaya

ಬೆಳ್ತಂಗಡಿ: ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಮಾರುಕಟ್ಟೆಗೆ

Suddi Udaya

ಯುವವಾಹಿನಿ ಘಟಕದಿಂದ ಯುವ ವೈಭವ 2025 ಕ್ಕೆ ಅದ್ದೂರಿ ಚಾಲನೆ : ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

Suddi Udaya
error: Content is protected !!