23.5 C
ಪುತ್ತೂರು, ಬೆಳ್ತಂಗಡಿ
June 8, 2026
ಅಪಘಾತಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗೇರುಕಟ್ಟೆ ಸಮೀಪದ ಬಟ್ಟೆಮಾರು ಎಂಬಲ್ಲಿ ಬೈಹುಲ್ಲು ಟ್ರಕ್ ಗೆ ಬೆಂಕಿ ಅವಘಡ

ಬೆಳ್ತಂಗಡಿ : ಗೇರುಕಟ್ಚೆ ಕಳಿಯ ಗ್ರಾಮದ ಬಟ್ಟೆಮಾರು ಸಮೀಪದ ಕೊಯ್ಯೂರು-ಪರಪ್ಪು ರಸ್ತೆಯ ರಕ್ತೇಶ್ವರಿಪದವು ಕೂಡು ರಸ್ತೆಯ ಪಕ್ಕದಲ್ಲಿ ಬೈಹುಲ್ಲು ಲಾರಿಗೆ ಬೆಂಕಿ ತಗುಲಿ ಬೈಹುಲ್ಲು ಹೊತ್ತಿ ಉರಿದ ಘಟನೆ ಎ.11 ರಂದು ಮಧ್ಯಾಹ್ನ ನಡೆಯಿತು.
ಬೈಲು ಲಾರಿಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಾಗ ರಸ್ತೆ ಪಕ್ಕದ ಯಾಕೂಬು ಮನೆಯವರು ನೋಡಿ ತಕ್ಷಣ ಲಾರಿ ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ತಂದರು. ನಂತರ ಸ್ಥಳೀಯ ಯುವಕರ ತಂಡ ಮನೆಗೆ-ಮನೆಗೆ ಧಾವಿಸಿ ನೀರು ತಂದು ಬೆಂಕಿ ನಂದಿಸುಲ್ಲಿ ಮಗ್ನರಾಗಿದ್ದರು. ಕಳಿಯ ಗ್ರಾ. ಪಂ.ಸದಸ್ಯ ಅಬ್ದುಲ್ ಕರೀಂ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಹಾಗೂ ಗೇರುಕಟ್ಟೆ ವಿನಯ ಪ್ರಸಾದ್ ರವರ ಜೆ.ಸಿ.ಬಿ.ಸಹಾಯದಿಂದ ಮತ್ತು ಪುರಂದರ ನಾಯ್ಕರವರು ಕೊಳವೆ ಬಾವಿ ನೀರನ್ನು ನೀಡುವ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯರ ಸಹಕಾರ:
ಅವಘಡ ನಡೆದ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಮತ್ತು ಮಕ್ಕಳಿಗೆ ಕುಡಿಯಲು ಶೇಖರಿಸಿಟ್ಟ ನೀರನ್ನು ಕೂಡಾ ಬೆಂಕಿ ನಂದಿಸಲು ನೀಡಿ ಸಹಕರಿಸಿದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಟ್ಟೆಮಾರು ಜನತಾ ಕಾಲೋನಿಯಲ್ಲಿ ರಂಜಾನ್ ಹಬ್ಬದ ಆಚರಣೆಗೆ ಬಂದು ಸೇರಿದ್ದ ಯುವಕರು, ಸ್ಥಳೀಯರು ಜಾತಿ ಮತ ಭೇಧ ಮರೆತು ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸುವ ಕೆಲಸಕ್ಕೆ ಕೈ ಜೋಡಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.
ಬೆಂಕಿಯ ಜ್ವಾಲೆಗೆ ಲಾರಿಯ ಮೇಲ್ಮೈ ಸುಟ್ಟು ಕರಕಲಾಗಿದೆ.
ನಮ್ಮ ಜೀವ ಮತ್ತು ಲಾರಿಯನ್ನು ಉಳಿಸಿಕೊಳ್ಳಲು ಶ್ರಮ ಪಟ್ಟವರಿಗೆಲ್ಲ ಸಕಲೇಶಪುರದ ಲಾರಿಚಾಲಕ ಮತ್ತು ನಿರ್ವಾಕ ಕಣ್ಣೀರು ಹಾಕಿ ಕೃತಜ್ಞತೆ ಸಲ್ಲಿಸಿದರು.

ಅವಘಡಕ್ಕೆ ಕಾರಣ:
ಬೆಂಕಿ ಅವಘಡ ಸಂಭವಿಸಿದ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ತಂತಿ ಕೇವಲ10 ಅಡಿಗೂ ಕಡಿಮೆ ಅಂತರದಲ್ಲಿ ಎಂದು ದೊಂಟಿ ಮೂಲಕ ಅಳತೆ ಮಾಡಿದ ಯುವಕರು. ತಂತಿ ಜೋತು ಬಿದ್ದಿರುವ ಪರಿಸ್ಥಿತಿಯಿಂದ ತಂತಿಯ ಮೂಲಕ ಬೈಹುಲ್ಲಿಗೆ ಬೆಂಕಿ ತಗುಲಿದೆ ಎಂದು ಸ್ಥಳೀಯರ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಕೂಡ ಜೆ.ಸಿ.ಬಿ.ಗೆ ತಂತಿ ತಗುಲಿ ಘಟನೆ ನಡೆದಿದೆ.
ತಂತಿ ಕಂಬಗಳಿಗೆ ಮತ್ತು ಟ್ರಾನ್ಸ್ ಫಾರ್ಮ್ ಗಿಡ,ಮರ, ಬಳ್ಳಿಗಳು ಅವರಿಸಿದ್ದು ಪವರ್ ಮನ್ ಮತ್ತು ಸಂಬಂಧಿಸಿದ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Related posts

“ನಾನು ರಾಜಕೀಯ ನಿವೃತ್ತಿ ನೀಡಿಲ್ಲ,: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಂದ ಸ್ಪಷ್ಟನೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ ಉದ್ಘಾಟನೆ

Suddi Udaya

ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕರ ಸಬಲೀಕರಣ ತರಬೇತಿ ದ.ಕ ಜಿಲ್ಲೆಯಿಂದ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಕೆ. ಆಯ್ಕೆ

Suddi Udaya

ಬಳಂಜ: ಸನಾತನ ಸಂಸ್ಥೆಯಿಂದ ವಿಶೇಷ ಪ್ರವಚನ

Suddi Udaya

ಲಾಯಿಲ: ಸೈಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಬಳಂಜ ಗ್ರಾ.ಪಂ. ನ ನೂತನ ಅಧ್ಯಕ್ಷರಾಗಿ ಶೋಭಾ ಕುಲಾಲ್, ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya
error: Content is protected !!