23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ:ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಟಾಪರ್ ಅನುಪ್ರಿಯರವರಿಗೆ ಸನ್ಮಾನ

ಬಳಂಜ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಅನುಪ್ರಿಯಾ ಬಳಂಜರವರು 594ಅಂಕಗಳೊಂದಿಗೆ ರಾಜ್ಯಕ್ಕೆ 5 ನೇ ಸ್ಥಾನದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನಿಯಾದ ಅವರನ್ನು ಅವರ ನಿವಾಸದಲ್ಲಿ ಎ.14 ರಂದು ಸನ್ಮಾನಿಸಲಾಯಿತು.

ಬಳಂಜ ಶಿಕ್ಷಣ ಟ್ರಸ್ಟ್,ಬಳಂಜ ಶಾಲಾ ಅಮೃತಾ ಮಹೋತ್ಸವ ಸಮಿತಿ, ಶಾಲಾಭಿವೃದ್ದಿ ಸಮಿತಿ,ಹಳೆ ವಿದ್ಯಾರ್ಥಿ ಸಂಘ,ಶ್ರೀ ಉಮಾಮಹೇಶ್ವರ ಯುವಕ ಮಂಡಲ, ಜ್ಯೋತಿ ಮಹಿಳಾ ಮಂಡಲ ಹಾಗೂ ವಿದ್ಯಾಭಿಮಾನಿಗಳ ಪರವಾಗಿ ಕು.ಅನುಪ್ರಿಯಾ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಳಂಜ ಪ್ರೌಢ ಶಾಲಾಭಿವೃದ್ದಿ ಉಪಾಧ್ಯಕ್ಷ ಕೆ.ವಸಂತ ಸಾಲಿಯಾನ್,ತಾ.ಪಂ ಮಾಜಿ ಸದಸ್ಯ ಹೆಚ್ ಧರ್ಣಪ್ಪ ಪೂಜಾರಿ,ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ,ಪ್ರಮುಖರಾದ ರತ್ನರಾಜ್ ಜೈನ್,ಸಂತೋಷ್ ಕುಮಾರ್ ಕಾಪಿನಡ್ಕ, ವಿನು ಬಳಂಜ, ರಾಕೇಶ್ ಹೆಗ್ಡೆ ಬಳಂಜ, ಪ್ರವೀಣ್ ಕುಮಾರ್ ಹೆಚ್‌ ಎಸ್, ಸಂತೋಷ್ ಪಿ ಕೋಟ್ಯಾನ್ ಬಳಂಜ, ದಿನೇಶ್ ಪೂಜಾರಿ ಅಂತರ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನುಪ್ರಿಯಾರವರ ಹೆತ್ತವರಾದ ಬಳಂಜ ಕಟ್ಟದಬೈಲು ಚಂದ್ರಶೇಖರ್ ಪಿ.ಕೆ ಮತ್ತು ಪೂರ್ಣಿಮಾ ದಂಪತಿ ಮಗಳ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Related posts

ಪಡ್ಡಂದಡ್ಕ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ನಲ್ಲಿ ಪವಿತ್ರ ಪರಮ ಪ್ರಸಾದದ ಭಾನುವಾರ ಹಾಗೂ ರೋಮ್ ನಿಂದ ಬಂದ ಪವಿತ್ರ ಶಿಲುಬೆಯ ಹಸ್ತಾಂತರ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಕಲ್ಮಂಜ : ಕೊಳಂಬೆಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ: ಅಪಾರ ಕೃಷಿ ನಾಶ

Suddi Udaya

ಬೆಳ್ತಂಗಡಿ: ಸಂಜಯನಗರ ನಿವಾಸಿ ಸೇಸಮ್ಮ ನಿಧನ

Suddi Udaya
error: Content is protected !!