ಕೊಯ್ಯೂರು: ಇಲ್ಲಿನ ಬಜಿಲ ಇಲ್ಲಿನ ಶ್ರೀ ವಿಷ್ಣುಮೂರ್ತಿ ಪುರುಷರ ಬಳಗದ ಈ ವರ್ಷದ ಪುರುಷ ಪೂಜೆ ಕಾರ್ಯಕ್ರಮ ಮೇಗಿನ ಬಜಿಲ ಲಕ್ಷ್ಮಣ ಗೌಡರ ಮನೆಯಲ್ಲಿ ಏ. 14ರಂದು ನಡೆಯಿತು.
ಈ ಸಂದರ್ಭ ಆಯೋಜಿಸಿದ್ದ 4ನೇ ವರ್ಷದ ಸನ್ಮಾನ ಸಭಾ ಕಾರ್ಯಕ್ರಮದಲ್ಲಿ ಪುರುಷ ಕುಣಿತದ ಹಿರಿಯ ಕಲಾವಿದರಾದ ಮೋನಪ್ಪ ಗೌಡ ಬಜಿಲ, ವೆಂಕಪ್ಪ ಗೌಡ ಬಜಿಲ, ಬೂಚ ಗೌಡ ಬಜಿಲ, ನೀಲಪ್ಪ ಗೌಡ ನೇಲ್ಯಲ್ಕೆ, ಧರ್ಣಪ್ಪ ಗೌಡ ಬೀಜದಡಿ, ಸಾಂತಪ್ಪ ಮಲೆಕುಡಿಯ ಸಾದೂರು ಮೊದಲಾದವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನೀಲಪ್ಪ ಗೌಡ ನೇಲ್ಯಲ್ಕೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಗಿನ ಬಜಿಲ ಲಕ್ಷ್ಮಣ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಯ್ಯೂರು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕುಮಾರ್ ಅಗ್ರಸಾಲೆ ಭಾಗವಹಿಸಿದ್ದರು. ಅವರು ಪುರುಷ ಕುಣಿತದ ವಿಶಿಷ್ಟತೆ ಬಗ್ಗೆ ಮಾತನಾಡಿ ಇದೊಂದು ಕಾರ್ಣಿಕದ ಕಲೆ; ಇದನ್ನು ಉಳಿಸಲು ನಾವೆಲ್ಲ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಅಶೋಕ್ ಕುಮಾರ್ ಅವರನ್ನು ಪುರುಷರ ಬಳಗದಿಂದ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಲಿಂಗಪ್ಪ ಗೌಡ ಮೇಗಿನ ಬಜಿಲ, ತಿಮ್ಮಯ್ಯ ಗೌಡ ಕೋಂಗುಜೆ, ವೆಂಕಪ್ಪ ಗೌಡ ಕೋರ್ಯಾರು ಉಪಸ್ಥಿತರಿದ್ದರು.
ಮೂರು ದಿನಗಳ ತಿರುಗಾಟದ ವೇಳೆ ಕಿರೀಟ ಧರಿಸಿದ ಮಕ್ಕಳನ್ನು ಪುಸ್ತಕ ಮತ್ತು ಕಂಪಾಸ್ ನೀಡಿ ಪ್ರೋತ್ಸಾಹಿಸಲಾಯಿತು.
ಗಿರಿಧರ ಗೌಡ ಕಜೆಕೋಡಿ ಸ್ವಾಗತಿಸಿದರು.
ದೀಪಿಕಾ ದಿವ ಕೊಕ್ಕಡ ಪ್ರಾರ್ಥನೆ ಮಾಡಿದರು. ದಿವ ಕೊಕ್ಕಡ ನಿರೂಪಿಸಿ, ಮೋನಪ್ಪ ಸಾಲಿಯಾನ್ ವಂದಿಸಿದರು.