April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ಸಾವಿತ್ರಿ ಬಿಜೆಪಿ ಸೇರ್ಪಡೆ

ಲಾಯಿಲ ಗ್ರಾಮದ ಬೂತ್ ಸಂಖ್ಯೆ 68 ರಲ್ಲಿ ಕಾಂಗ್ರೇಸ್ಸಿನ ಸಕ್ರೀಯ ಕಾರ್ಯಕರ್ತೆಯಾಗಿದ್ದ ಸಾವಿತ್ರಿ ಕೃಷ್ಣಪ್ಪ ಪುತ್ರಬೈಲು ರವರು ಶಾಸಕ ಹರೀಶ್ ಪೂಂಜಾರವರ ಕಳೆದ 5 ವರುಷಗಳ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ತಾಲೂಕು ಎಸಿ ಮೋರ್ಚಾದ ನೂತನ ಅಧ್ಯಕ್ಷ ಹಿರಿಯರಾದ ಈಶ್ವರ ಬೈರ ಹಾಗೂ ಬೂತ್ 68 ರ ನೂತನ ಅಧ್ಯಕ್ಷ ಮಧುಸೂಧನ್ ರವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.

ಪಕ್ಷದ ಶಾಲು ಹಾಗೂ ಧ್ವಜವನ್ನು ನೀಡುವ ಮೂಲಕ ಈಶ್ವರ ಭೈರ ಹಾಗೂ ಬೂತ್ ಅಧ್ಯಕ್ಷ ಮಧುಸೂಧನ್ ಸಾವಿತ್ರಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.


ಈ ಸಂದರ್ಭದಲ್ಲಿ ಬೂತ್ 68ರ ಕಾರ್ಯದರ್ಶಿಯಾದ ಹರಿಕೃಷ್ಣ ಪುತ್ರಬೈಲು, ಬೂತ್ ಸಮಿತಿ ಸದಸ್ಯರಾದ ರಾಜೇಂದ್ರ ಗಾಂಧಿನಗರ, ಹಾಗೂ ತಾ.ಪಂ ಮಾಜಿ ಸದಸ್ಯರಾದ ಸುಧಾಕರ್ ಬಿ.ಎಲ್, ಹಾಗೂ ಕೃಷ್ಣಪ್ಪ ಬೈರ ಉಪಸ್ಥಿತರಿದ್ದರು.

Related posts

ಕೊಕ್ಕಡ: ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ಒಡಿಶಾದ ರೈಲು ದುರಂತದಲ್ಲಿ ಪಾರಾದ ವೇಣೂರಿನ ಪ್ರಯಾಣಿಕರು

Suddi Udaya

ಕೊಕ್ಕಡ: ಹೊನ್ನಮ್ಮ ಹೃದಯಾಘಾತದಿಂದ ನಿಧನ

Suddi Udaya

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ವಿಧಿವಶ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ )ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿಆಟಿದ ಕಷಾಯ.. ವಿತರಣಾ ಕಾರ್ಯಕ್ರಮ

Suddi Udaya
error: Content is protected !!