24.4 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದಯಾ ವಿಶೇಷ ಶಾಲೆಯಲ್ಲಿ ಭೂಮಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

ಲಾಯಿಲ: ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಂಗಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಎ.22 ರಂದು ಭೂಮಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ. ಫಾ. ವಿನೋದ್ ಮಸ್ಕರೇನಸ್, ವಕೀಲರು ಹಾಗೂ ನಿರ್ದೇಶಕರು, ದಯಾ ವಿಶೇಷ ಶಾಲೆ ಇವರು ವಹಿಸಿ, ಉಧ್ಘಾಟಕರಾದ ಬೆಳ್ತಂಗಡಿ ಜೆ.ಎಮ್.ಎಫ್.ಸಿ. ನ್ಯಾಯಾಲಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಹೆಚ್ ಭಾರತದ ಸಂವಿಧಾನ ಪುಸ್ತಕಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಎಲೋಶಿಯಸ್ ಎಸ್. ಲೋಬೋ, ಅಧ್ಯಕ್ಷರು, ಹಿರಿಯ ವಕೀಲರ ಸಂಘ, ಬೆಳ್ತಂಗಡಿ. , ವಿನಯಕುಮಾರ್ ಎಂ, ಜೊತೆ ಕಾರ್ಯದರ್ಶಿ ವಕೀಲರ ಸಂಘ, ಬೆಳ್ತಂಗಡಿ, ಶ್ರೀಮತಿ. ದಿವ್ಯಾ ಟಿ.ವಿ, ಮುಖ್ಯಶಿಕ್ಷಕಿ ದಯಾ ವಿಶೇಷ ಶಾಲೆ, ಪೋಷಕ ಪ್ರತಿನಿಧಿಯಾಗಿ ಶ್ರೀಮತಿ ಗೀತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶಾಲೆಯ ವಿಶೇಷ ಚೇತನ ಮಕ್ಕಳು, ಅವರ ಪೋಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಐಶ್ವರ್ಯರವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಶಿಕ್ಷಕ .ರಮೇಶ್ ರವರು ಸರ್ವರಿಗೂ ವಂದಿಸಿದರು.

Related posts

ನಿಡ್ಲೆ ಸರಕಾರಿ ಪ್ರೌಢ ಶಾಲೆಗೆ ಶೇ.95.83 ಫಲಿತಾಂಶ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

Suddi Udaya

ಲಾಯಿಲ: ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್. ಸೇವಾ ನಿವೃತ್ತಿ

Suddi Udaya

ಮಚ್ಚಿನ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಹಾಯ ಧನ ಹಸ್ತಾಂತರ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ವಿದ್ಯಾರ್ಥಿ ಸಂಘದ ಚುನಾವಣೆ “

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವೈಭವ; ಬೆಳ್ಳಿಯ ಕಲಶ ಸಮರ್ಪಣೆ

Suddi Udaya
error: Content is protected !!