April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

ಬೆಳ್ತಂಗಡಿ: “ನಮ್ಮ ದೇಶದ ಶ್ರೀಮಂತಿಕೆ ಇರುವುದು ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ. ರೈತನಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ರೈತರ ಬದುಕನ್ನು ಪೇಟೆಯಲ್ಲಿದ್ದವರು ಅರಿತುಕೊಳ್ಳಬೇಕು. ಹಳ್ಳಿಗಳನ್ನು ಪೇಟೆಗಳಂತೆ ಅಭಿವೃದ್ಧಿಗೊಳಿಸಬೇಕು” ಎಂದು ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಹೇಳಿದರು.

ಅವರು ದ.ಕ.ಜಿ.ಪ.ಕಿರಿಯ ಪ್ರಾಥಮಿಕ ಶಾಲೆ – ಮಕ್ಕಿ ಇಲ್ಲಿ ನಡೆದ ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಶಿರ್ತಾಡಿ ಶ್ರೀ ಭುವನಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿ’ಸೋಜ ಮಾತನಾಡಿ “ಶ್ರಮವಿಲ್ಲದ ಜೀವನ ವ್ಯರ್ಥ. ಶ್ರಮವಿದ್ದರೆ ಮಾತ್ರ ಒಬ್ಬ ವ್ಯಕ್ತಿ ತನ್ನ ಗುರಿಯನ್ನು ಸಾಧಿಸಬಲ್ಲ” ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ. ಆಲ್ವಿನ್ ಸೆರಾವೊ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್.ಎ., ಶ್ರೀ ಪಂಚಶಕ್ತಿ ದೈವಸ್ಥಾನ ಮಕ್ಕಿ ಅಧ್ಯಕ್ಷ ನಾರಾಯಣ ಭಟ್, ಶಿರ್ತಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಶಶಿಧರ ದೇವಾಡಿಗ ಗೇಂದೋಟ್ಟು, ಲೂಯಿಸ್ ಡಿ’ಸೋಜ ಮಕ್ಕಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಸಂತೋಷ್ ಸಲ್ಡಾನ, ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೇಬಿ, ಎನ್ ಎಸ್ ಎಸ್ ಕಾರ್ಯದರ್ಶಿಗಳಾದ ಕು.ವಿಘ್ನೇಶ್ ಆಚಾರ್ಯ, ಕು.ಅನ್ವಿತಾ ರಾವ್ ಹಾಗೂ ವಿದ್ಯಾರ್ಥಿ ಸಂಘದ ಅದ್ಯಕ್ಷ ಕೇಶವ್ ಶರ್ಮ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದಿನೇಶ್ ಬಿ.ಕೆ ಬಳಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕ ಅವಿನಾಶ್ ಲೋಬೊ ಧನ್ಯವಾದವಿತ್ತರು .ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಸಂತೋಷ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬಂದಾರು: ಕುಂಟಾಲಪಲ್ಕೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya

ಕಳೆಂಜ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಕಣಿಯೂರು ಅಶೋಕ್ ಕುಲಾಲ್ ರಿಂದ ಖಂಡಿಗ ವಾಸಪ್ಪ ಗೌಡರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

Suddi Udaya

ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಡಾನ್ಸ್ ರಿಯಾಲಿಟಿ ಶೋ: ಬೆಳ್ತಂಗಡಿಯ ಟಿವಾ ಡಾನ್ಸ್ ಕ್ರೀವ್ ವಿದ್ಯಾರ್ಥಿನಿ ಕು| ವಂಶಿ ತಂಡ ದ್ವಿತೀಯ ಸ್ಥಾನ

Suddi Udaya

ಕಡಿರುದ್ಯಾವರ ಬಿಜು ತೋಮಸ್ ರವರ ಬಾಳೆ ಕೃಷಿ ಗಾಳಿ ಮಳೆಗೆ ಸರ್ವನಾಶ

Suddi Udaya
error: Content is protected !!