24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ : ಕುಸಿದು ಬಿದ್ದು ಅಪರಿಚಿತ ವ್ಯಕ್ತಿ ಸಾವು

ಉಜಿರೆ : ಕುಸಿದು ಬಿದ್ದು ಅಪರಿಚಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉಜಿರೆ ಬಳಿ ಎ.24 ರ ಮಧ್ಯಾಹ್ನ ಸಂಭವಿಸಿದೆ.

ಉಜಿರೆ ಚಾರ್ಮಾಡಿ ರಸ್ತೆಯ ಅಜಿತ್ ನಗರ ಕ್ರಾಸ್ ಬಳಿ ವ್ಯಕ್ತಿಯೊಬ್ಬರು ರಸ್ತೆ ಬದಿಯ ಚರಂಡಿಯ ಸ್ಲ್ಯಾಬ್ ಮೇಲೆ ಕುಳಿತಿದ್ದ ಸುಮಾರು 35-40 ವರ್ಷದ ವ್ಯಕ್ತಿ ಅಲ್ಲೆ ರಸ್ತೆಗೆ ಉರುಳಿ ಬಿದ್ದು ಸಾವನ್ನಪ್ಪಿದ್ದು ಇದನ್ನು ಗಮನಿಸಿದ ಸ್ಥಳೀಯರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು  ಪರಿಶೀಲನೆ ನಡೆಸಿ‌ದ್ದಾರೆ. ಮೃತ ದೇಹ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿಕೊಡಲಾಗಿದೆ.

ಮೃತ ವ್ಯಕ್ತಿ ಅಪರಿಚಿತನಂತೆ ಕಾಣುತಿದ್ದು ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು ಹಾಗೂ ಸ್ಥಳೀಯರು ಪೊಲೀಸರಿಗೆ ಸಹಕಾರ ನೀಡಿದ್ದಾರೆ.

ಅಪರಿಚಿತ ಗಂಡಸಿನ ಮೃತದೇಹದ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

Related posts

ಕನ್ಯಾಡಿ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯ ವಾರ್ಷಿಕೋತ್ಸವ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಗುರುರಾಜ್ ಗುರಿಪಳ್ಳ, ಕಾರ್ಯದರ್ಶಿಯಾಗಿ ಮಧುರ ರಾಘವ ಆಯ್ಕೆ

Suddi Udaya

ಆ.23: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಕಾರ್ಮಿಕರ ಮಹಾಸಭೆ

Suddi Udaya

ಮಚ್ಚಿನ : ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya
error: Content is protected !!