April 12, 2025
ಚುನಾವಣೆ

ಚಾರ್ಮಾಡಿ ಮತಗಟ್ಟೆಗೆ ಆಗಮಿಸಿದ ಅಧಿಕಾರಿಗಳಿಗೆ ಪೂರ್ಣಕುಂಭದ ಸ್ವಾಗತ

ಚಾರ್ಮಾಡಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಳೆ ಎ.೨೬ರಂದು ನಡೆಯಲಿರುವ ಮತದಾನಕ್ಕಾಗಿ ಚಾರ್ಮಾಡಿ ಮಾದರಿ ಮತಗಟ್ಟೆ ೨೪ ರಾಜೀವ ಗಾಂಧಿ ಸೇವಾ ಕೇಂದ್ರದ ಮತಗಟ್ಟೆಗೆ ಇಂದು ಆಗಮಿಸಿದ ಮತಗಟ್ಟೆ ಅಧಿಕಾರಿಗಳನ್ನು ಬಿ.ಎಲ್.ಒ ಮತ್ತು ಪಂಚಾಯತು ಸಿಬ್ಬಂದಿಗಳು ತುಳುನಾಡ ಸಾಂಪ್ರಾದಾಯದಂತೆ ಪೂರ್ಣಕುಂಬದೊಂದಿಗೆ ಸ್ವಾಗತಿಸಿದರು.

ಮತಗಟ್ಟೆಯಲ್ಲಿ ಯಶಸ್ವಿಯಾಗಿ ಮತದಾನ ನಡೆಯಲಿ ಎಂದು ಹಾರೈಕೆಯೊಂದಿಗೆ, ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಗಮಿಸಿದಾಗ ಮತಗಟ್ಟೆಯಲ್ಲಿ ದೀಪಬೆಳಗಿಸಿ ಬಳಿಕ ಕಳಸೆಯಲ್ಲಿ ತೆಂಗಿನ ಹಿಂಗಾರ ಅರಳಿಸಿ

ಸ್ವಾಗತಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಚುನಾವಣೆಗೆ ಮತಗಟ್ಟೆಗೆ ಆಗಮಿಸುವ ಅಧಿಕಾರಿಗಳಿಗೆ ಈ ರೀತಿಯ ಸ್ವಾಗತ ದೊರೆತಿರುವುದು ಇದು ಪ್ರಥಮವಾಗಿದೆ. ಇದನ್ನು ಚಾರ್ಮಾಡಿಯ ಬಿಎಲ್‌ಒ ಮತ್ತು ಪಂಚಾಯತು ಸಿಬ್ಬಂದಿಗಳು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

Related posts

ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ: ಹೊಸ ದಾಖಲೆ ನಿರ್ಮಿಸಿದ ಬಾಂಜಾರುಮಲೆಯ ಮತದಾರರು

Suddi Udaya

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ದಿವಿತ್ ದೇವಾಡಿಗ ಆಯ್ಕೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಲಾಯಿಲ ಗ್ರಾಮದ ಕಾಂಗ್ರೆಸ್ ಅಧ್ಯಕ್ಷರ ,ಕಾರ್ಯದರ್ಶಿ ಹಾಗೂ ಪ್ರಮುಖರ ಸಭೆ

Suddi Udaya

ಲಾಯಿಲ ಜಿ.ಪಂ. ವ್ಯಾಪ್ತಿಯ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಮತಯಾಚನೆ

Suddi Udaya

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡರು

Suddi Udaya

ಇಂದಿನಿಂದ ದ.ಕ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರಗಳ ಸ್ವೀಕಾರ ಆರಂಭ: ಜಿಲ್ಲಾಧಿಕಾರಿ

Suddi Udaya
error: Content is protected !!