September 6, 2026
ಚುನಾವಣೆ

ಚಾರ್ಮಾಡಿ ಮತಗಟ್ಟೆಗೆ ಆಗಮಿಸಿದ ಅಧಿಕಾರಿಗಳಿಗೆ ಪೂರ್ಣಕುಂಭದ ಸ್ವಾಗತ

ಚಾರ್ಮಾಡಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಳೆ ಎ.೨೬ರಂದು ನಡೆಯಲಿರುವ ಮತದಾನಕ್ಕಾಗಿ ಚಾರ್ಮಾಡಿ ಮಾದರಿ ಮತಗಟ್ಟೆ ೨೪ ರಾಜೀವ ಗಾಂಧಿ ಸೇವಾ ಕೇಂದ್ರದ ಮತಗಟ್ಟೆಗೆ ಇಂದು ಆಗಮಿಸಿದ ಮತಗಟ್ಟೆ ಅಧಿಕಾರಿಗಳನ್ನು ಬಿ.ಎಲ್.ಒ ಮತ್ತು ಪಂಚಾಯತು ಸಿಬ್ಬಂದಿಗಳು ತುಳುನಾಡ ಸಾಂಪ್ರಾದಾಯದಂತೆ ಪೂರ್ಣಕುಂಬದೊಂದಿಗೆ ಸ್ವಾಗತಿಸಿದರು.

ಮತಗಟ್ಟೆಯಲ್ಲಿ ಯಶಸ್ವಿಯಾಗಿ ಮತದಾನ ನಡೆಯಲಿ ಎಂದು ಹಾರೈಕೆಯೊಂದಿಗೆ, ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಗಮಿಸಿದಾಗ ಮತಗಟ್ಟೆಯಲ್ಲಿ ದೀಪಬೆಳಗಿಸಿ ಬಳಿಕ ಕಳಸೆಯಲ್ಲಿ ತೆಂಗಿನ ಹಿಂಗಾರ ಅರಳಿಸಿ

ಸ್ವಾಗತಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಚುನಾವಣೆಗೆ ಮತಗಟ್ಟೆಗೆ ಆಗಮಿಸುವ ಅಧಿಕಾರಿಗಳಿಗೆ ಈ ರೀತಿಯ ಸ್ವಾಗತ ದೊರೆತಿರುವುದು ಇದು ಪ್ರಥಮವಾಗಿದೆ. ಇದನ್ನು ಚಾರ್ಮಾಡಿಯ ಬಿಎಲ್‌ಒ ಮತ್ತು ಪಂಚಾಯತು ಸಿಬ್ಬಂದಿಗಳು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

Related posts

ಪಡಂಗಡಿ: ಕಾಂಗ್ರೆಸ್ ಕಾರ್ಯಕರ್ತ ನಝೀರ್ ಬಿಜೆಪಿ ಸೇರ್ಪಡೆ

Suddi Udaya

ಮೂಡುಕೋಡಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಮತದಾನ : ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ಜನವೋ ಜನ

Suddi Udaya

ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಗೆಲುವು ನಿಶ್ಚಿತ- ಮಾಜಿ ಶಾಸಕ ವಸಂತ್ ಬಂಗೇರ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ – 7 ಸ್ಥಾನ, ಕಾಂಗ್ರೆಸ್ – 5 ಸ್ಥಾನ

Suddi Udaya

ಹೊಸಂಗಡಿ ಗ್ರಾ.ಪಂ. ಉಪ ಚುನಾವಣೆಯಲ್ಲಿ ಜಯ ಗಳಿಸಿದ ಆನಂದ ಬಂಗೇರರಿಗೆ ರಕ್ಷಿತ್ ಶಿವರಾಂರಿಂದ ಅಭಿನಂದನೆ

Suddi Udaya

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ: ನಾವೂರಿನಲ್ಲಿ ಸಂಭ್ರಮಾಚರಣೆ

Suddi Udaya
error: Content is protected !!