April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಭಾರತೀಯ ಸಾಂಸ್ಕೃತಿಕ ವಿಕಾಸಕ್ಕಾಗಿ ನರೇಂದ್ರ ಮೋದಿಜೀಯವರು ಮತ್ತೊಮ್ಮೆ ಪ್ರಧಾನಿಯಾಗಲು ಕ್ಯಾ| ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರನ್ನು ಗೆಲ್ಲಿಸಿ ಸಂಸ್ಕಾರ ಭಾರತೀ ಬೆಳ್ತಂಗಡಿ ಘಟಕ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿಕೆ

ಬೆಳ್ತಂಗಡಿ:ವಿಶ್ವಕ್ಕೆ ಬೆಳಕು ನೀಡಿದ ಭಾರತೀಯ ಸಂಪ್ರದಾಯಗಳ ಆಚರಣೆ, ಸನಾತನ ಭಾರತೀಯ ಧರ್ಮವನ್ನು ಆಚರಿಸುವ ನಾಯಕತ್ವವನ್ನು ಬಿಜೆಪಿ ಕೇಂದ್ರ ಸರಕಾರ ಕಳೆದ 10 ವರ್ಷಗಳಲ್ಲಿ ನೀಡಿದೆ.

ಹಿಂದೂಗಳ ಶತಮಾನಗಳ ಕನಸಾದ ರಾಮ ಮಂದಿರ ನಿರ್ಮಾಣ,ದೇಶದ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗಾಗಿ ಪ್ರಸಾದ ಯೋಜನೆ,ತೀರ್ಥ ಯಾತ್ರಿಗಳ ಅನುಕೂಲಕ್ಕಾಗಿ ರಾಮಾಯಣ ಎಕ್ಸಪ್ರೆಸ್ ರೈಲು ಯೋಜನೆ,ಪೂಜ್ಯನೀಯ ಗಂಗಾ ನದಿ ಸ್ವಚ್ಚಗೊಳಿಸುವ ನಮಾಮಿ ಗಂಗೆ ಯೋಜನೆ,ಯೋಗ ಆಯುರ್ವೇದಗಳಿಗೆ ವಿಶ್ವ ಮಾನ್ಯತೆ,ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ, ಕೇದಾರ ನಾಥ, ಉಜ್ಜಯಿನಿ ಯ ಮಹಾಕಾಲ ಕಾರಿಡಾರ್ ಯೋಜನೆ,ರಾಮಸೇತುವಿನ ರಕ್ಷಣೆ,
ಹೀಗೆ ನಮ್ಮ ದೇಶದ ನಾಗರಿಕತೆಯ ಸಂಕೇತಗಳಾದ ದೇವಾಲಯಗಳು, ಶತಮಾನಗಳ ಹಿನ್ನಲೆ ಇರುವ ಧಾರ್ಮಿಕ ಕಟ್ಟಡಗಳು, ಸಂಪ್ರದಾಯಗಳು , ಪಾರಂಪರಿಕ ತಾಣಗಳು, ಯಾತ್ರಾ ಸ್ಥಳಗಳು ಅಭಿವೃದ್ಧಿ ಹೊಂದಿದೆ .

ಭಾರತೀಯ ಸಂಸ್ಕೃತಿ ಮೇಳೈಸುವ ಸರಕಾರವನ್ನು ನೀಡಿ ಆ ಮೂಲಕ ನಮ್ಮ ಶ್ರೇಷ್ಠ ಪರಂಪರೆ,ಇತಿಹಾಸದ ಪ್ರಜ್ಞೆ ಮತ್ತು ಸಾವಿರಾರು ವರ್ಷಗಳಿಂದ ಅಖಂಡವಾಗಿ ಈ ಮಣ್ಣಿನಲ್ಲಿ ವಿಕಾಸವಾದ ಮೌಲ್ಯ ಗಳ ಪುನರುತ್ಥಾನ ಮಾಡಿ ರಾಷ್ಟ್ರದ ಭವಿಷ್ಯ ರೂಪಿಸಿದ ಹೆಮ್ಮೆ ಸನ್ಮಾನ್ಯ ನರೇಂದ್ರ ಮೋದಿ ಅವರದ್ದು.

ಪ್ರಾಚೀನ ಭಾರತ ಮತ್ತು ಭವಿಷ್ಯದ ನವ ಭಾರತದೊಂದಿಗೆ ಆಧುನಿಕ ಭಾರತದ ಸಂಪರ್ಕವನ್ನು ಮೋದಿ ಮರುಸ್ಥಾಪಿಸಿ , ರಾಜತಾಂತ್ರಿಕ, ಆರ್ಥಿಕ, ಮಿಲಿಟರಿ ಮತ್ತು ಸಾಂಸ್ಕೃತಿಕ ಮಟ್ಟದಲ್ಲಿ ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಿದ್ದಾರೆ. ಮೋದಿ ಕಲ್ಪನೆಯ ನವಭಾರತವು ಮಾನವೀಯತೆಯ ಹೊಸ ಬೆಳಕು ನೀಡಿದೆ.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಬರೆದು ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿಸಿ ಭಾವನಾತ್ಮಕವಾಗಿ ಬೆಸೆದಿದ್ದಾರೆ
ಹೀಗೆ ಮೋದಿ ಆಡಳಿತದಲ್ಲಿ ಭಾರತೀಯ ಸಂಸ್ಕೃತಿಯ ಕಂಪನವು ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸಿದೆ.ದೇಶದ ಜನಸಾಮಾನ್ಯರಿಗೆ, ತೆರೆಮರೆಯ ಸಾಧಕರಿ ಗೆ ಪದ್ಮ ಪ್ರಶಸ್ತಿಯ ಗೌರವ ಕೊಡುವ ಮೂಲಕ ಹೊಸ ಇತಿಹಾಸ ಬರೆದಿದೆ. ಹೀಗೆ ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ವಿದೇಶಾಂಗ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು, ಯೋಜನೆಗಳನ್ನು ತರುವ ಮೂಲಕ ಹಿಂದೆಂದೂ ಕಾಣದ ರೀತಿಯಲ್ಲಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಇಂಥ ಶ್ರೇಷ್ಠ ನಾಯಕತ್ವಕ್ಕಾಗಿ ನರೇಂದ್ರ ಮೋದಿಯವರನ್ನು ನಾವೆಲ್ಲ ಬೆಂಬಲಿಸಬೇಕು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿವೃತ್ತ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗು ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ ನೀಡಿ ಅಭೂತ ಪೂರ್ವ ಜಯ ದಾಖಲಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹರಸಬೇಕೆಂದು ಸಂಸ್ಕಾರ ಭಾರತೀ ,ಬೆಳ್ತಂಗಡಿ ಘಟಕ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ದ ಅಧ್ಯಕ್ಷರಾದ ಸಂಪತ್ ಬಿ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಶಿಶಿಲ: ದಿ. ಧರ್ಣಪ್ಪ ಗೌಡ ರವರ ಸ್ಮರಣಾರ್ಥ ಕೊರಗಪ್ಪ ಗೌಡರಿಂದ ನಂದಗೋಕುಲ ಗೋಶಾಲೆಗೆ ದೇಣಿಗೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ತಾಲೂಕಿನ ಗ್ರಾ.ಪಂ. ಗಳ ಪಿಡಿಒ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ

Suddi Udaya

ಕಣಿಯೂರು ಶ್ರೀ ಮಹಮ್ಮಾಯಿ ಪುರ್ಸಾದ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಬಿಜೆಪಿ ದ.ಕ. ಜಿಲ್ಲಾ ಪ್ರಕೋಷ್ಠದ ಸಹಸಂಚಾಲಕರಾಗಿ ರಕ್ಷಿತ್ ಶೆಟ್ಟಿ ಪಣಿಕ್ಕರ ಆಯ್ಕೆ

Suddi Udaya

ಜೂ.10: ಸುಲ್ಕೇರಿ ಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರ ಕುಟೀರದ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!