ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಭಾರತ ಚುನಾವಣಾ ಆಯೋಗ ದಕ್ಷಿಣ ಕನ್ನಡ ಜಿಲ್ಲೆಯ ಸ್ವೀಪ್ ಸಮಿತಿಯು ಜಂಟಿಯಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಎ. 23 ರಂದು ಬೆಳ್ತಂಗಡಿ ಜೆಸಿಐ ಭವನದಲ್ಲಿ ಹಮ್ಮಿಕೊಂಡಿತು.
ಮಾಯಾ ಹಿರಿಯ ಪ್ರಾಥಮಿಕ ಶಾಲೆ,ಬೆಳಾಲಿನ ಶಿಕ್ಷಕರು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯ ತರಬೇತುದಾರ ಯೋಗೇಶ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನದ ಮಹತ್ವ ಹಾಗೂ ಎಲ್ಲರು ಕಡ್ಡಾಯವಾಗಿ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಚುನಾವಣೆಗಳಲ್ಲಿ ನಮ್ಮ ಒಂದು ಮತದ ಮಹತ್ವ ಹಾಗೂ ಅದು ಹೇಗೆ ಪರಿಣಾಮಕಾರಿಯಾಗ ಬಹುದು ಎಂದು ವಿವರಿಸಿದರು.
ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ರಂಜಿತ್ ಎಚ್ ಡಿ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿ, ಎಲ್ಲರನ್ನು ಸ್ವಾಗತಿಸಿದರು.
ಬೆಳ್ತಂಗಡಿ ತಾಲ್ಲೂಕು ಚುನಾವಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತ್ ಬೆಳ್ತಂಗಡಿಯ ಕಾರ್ಯನಿರ್ವಾಹನಾಧಿಕಾರಿ ವೈಜಣ್ಣ ಹಾಗೂ ತಾಲ್ಲೂಕು ಪಂಚಾಯತ್ ಬೆಳ್ತಂಗಡಿಯ ವ್ಯವಸ್ಥಾಪಕರಾಗಿರುವ ಪ್ರಶಾಂತ್ ಡಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್, ಜೆಜೆಸಿ ಅಧ್ಯಕ್ಷರಾದ ಸಮನ್ವೀತ್ ಕುಮಾರ್ ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯತ್ ಅಧಿಕಾರಿ ಮಂಜು, ಬಳಂಜ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಧರ್ನಮ್ಮ, ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಕೇಶವತಿ ಡಿ , SKDRDP ಯೋಜನಾಧಿಕಾರಿ ಜಯಾನಂದ ಬಳಂಜ, ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಪ್ರಶಾಂತ್ ಲಾಯಿಲ, ಉಪಾಧ್ಯಕ್ಷರುಗಳಾದ ಆಶಾ ಪ್ರಶಾಂತ್, ಶೈಲೇಶ್, ಸದಸ್ಯರಾದ ರಜತ್, ಜೆಜೆಸಿ ದೀಪ್ತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವೇದಿಕೆ ಆಹ್ವಾನವನ್ನು ಉಪಾಧ್ಯಕ್ಷರಾದ ಸುಧೀರ್ ಕೆ ನ್ ಹಾಗೂ ಜೆಸಿ ವಾಣಿಯನ್ನು ಮಹಿಳಾ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್ ಇವರು ನಡೆಸಿಕೊಟ್ಟರು. ನಿಕಟ ಪೂರ್ವ ಅಧ್ಯಕ್ಷರಾದ ಶಂಕರ್ ರಾವ್ ತಮ್ಮ ಅನಿಸಿಕೆಗಳೊಂದಿಗೆ ಧನ್ಯವಾದ ಸಲ್ಲಿಸಿದರು.