23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದೊಡ್ಡ ಕರಳು ಹಾಗೂ ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಖಾಸಗಿ ಕಾಲೇಜಿನ ಉಪನ್ಯಾಸಕ ನಂದಕುಮಾರ್ ರವರ ಚಿಕಿತ್ಸೆಗೆ ನೆರವಾಗಿ

ಬೆಳ್ತಂಗಡಿ : ಖಾಸಗಿ ಕಾಲೇಜಿನ ಉಪನ್ಯಾಸಕರೋರ್ವರು ಕಳೆದ ಅನೇಕ ದಿನಗಳಿಂದ ದೊಡ್ಡ ಕರಳು ಹಾಗು ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಾ ಮಂಗಳೂರು ಕೆ ಎಂ ಸಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗಾಗಿ ಸಾರ್ವಜನಿಕರ ಸಹಾಯಧನವನ್ನು ಯಾಚಿಸಿದ್ದಾರೆ.

ಪುದುವೆಟ್ಟು ಗ್ರಾಮದ ನಂದಕುಮಾರ್ (40) ಈ ಕಾಯಿಲೆಯಿಂದ ಬಳಲುತ್ತಿರುವವರು. ವೃತ್ತಿಯಲ್ಲಿ ಉಪನ್ಯಾಸಕರಾಗಿ ಖಾಸಗಿ ಕಾಲೇಜಿನಲ್ಲಿ ದುಡಿಯುತ್ತಿರುವ ಇವರು ತೀರಾ ಬಡ ಕುಟುಂಬದವರು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಾ ಬಂದ ಆದಾಯದಲ್ಲಿ ಅಪ್ಪ ಅಮ್ಮ ಹೆಂಡತಿ ಹಾಗೂ 3 ಮತ್ತು 6 ವರ್ಷದ 2 ಹೆಣ್ಣು ಮಕ್ಕಳ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಇದೀಗ ತನ್ನ ಪಾಲಿಗೆ ಬಂದ ಕಾಯಿಲೆಯಿಂದಾಗಿ ಇಡೀ ಕುಟುಂಬವೇ ದಿಕ್ಕು ಕಾಣದಂತಾಗಿದೆ.

ಈಗಾಗಲೇ 5 ಲಕ್ಷ ಕ್ಕೂ ಹೆಚ್ಚಿನ ಹಣ ಖರ್ಚಾಗಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಗೆ 6 ರಿಂದ 8 ಲಕ್ಷಕ್ಕೂ ಅಧಿಕ ಹಣ ಬೇಕಾಗಿದೆ. ಒಂದೆಡೆ ಕಾಯಿಲೆ, ಇನ್ನೊಂದೆಡೆ ಕುಟುಂಬ ನಿರ್ವಹಣೆ ಈ ಎಲ್ಲದರ ಮಧ್ಯೆ ನಿತ್ಯ ಕಣ್ಣೀರನ್ನು ಸುರಿಸಬೇಕಾದ ಸ್ಥಿತಿಯಲ್ಲಿ ಈ ಕುಟುಂಬವಿದೆ. ಕುಟುಂಬಕ್ಕೆ ಆದಾಯ ಮೂಲವಾಗಿದ್ದ ನಂದಕುಮಾರ್ ಕಳೆದ 2 ತಿಂಗಳಿನಿಂದ ಆಸ್ಪತ್ರೆಯಲ್ಲೇ ಇರುವಂತಾಗಿದೆ. ಈಗಾಗಲೇ ಖರ್ಚಾದ ಸುಮಾರು 5 ಲಕ್ಷ ದ ಚಿಕಿತ್ಸಾ ವೆಚ್ಚಕ್ಕೆ ಅವರ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಊರಿನ ಅನೇಕ ದಾನಿಗಳು ಸಹಾಯ ಹಸ್ತ ನೀಡಿದ್ದು ಇನ್ನುಳಿದ ಚಿಕಿತ್ಸೆಯ ಖರ್ಚಿಗೆ ದಾನಿಗಳ ನೆರವು ಇಡೀ ಕುಟುಂಬವೇ ಬಯಸುತ್ತಿದೆ.

ಸಹಾಯಧನ ನೀಡುವವರು ಅವರ ಪತ್ನಿ ದಿವ್ಯಾ ನಂದಕುಮಾರ್ ಅವರ ಗೂಗಲ್ ಪೇ ನಂಬರ್ 94811 65791 ಅಥವಾ ದಿವ್ಯಾ ಕೆ ಜೆ ಹೆಸರಿನಲ್ಲಿರುವ ಬ್ಯಾಂಕ್ ಆಫ್ ಬರೋಡ ಖಾತೆ ಸಂಖ್ಯೆ 45150100005291(IFSC CODE – BARBOVJBTHA) ಗೆ ಕಳುಹಿಸಿಕೊಡುವಂತೆ ವಿನಂತಿಯನ್ನು ಮಾಡಿದ್ದಾರೆ.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಉಪ್ಪಿನಂಗಡಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮಾಹಿತಿ

Suddi Udaya

ರಾಜ-ಮಹಾರಾಜ ಜೋಡುಕರೆ ಕಂಬಳ: ಮುಳಿಯ ಜ್ಯುವೆಲ್ಸ್ ನಿಂದ ಆಭರಣಗಳ ಪ್ರದರ್ಶನ: ಮುಳಿಯ ಪ್ರಾಪರ್ಟೀಸ್‌ ಬಗ್ಗೆ ಮಾಹಿತಿ ಕೇಂದ್ರ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ: ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ. ಆಯ್ಕೆ

Suddi Udaya

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!