September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಬಿಸಿಎ ವಿಭಾಗದಿಂದ ಎನಿಗ್ಮಾ-2024

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ಬಿಸಿಎ ವಿಭಾಗದಿಂದ ಎನಿಗ್ಮಾ-2024 ಎ.23ರಂದು ಆಯೋಜಿಸಲಾಯಿತು.

ವೇದಿಕೆಯಲ್ಲಿ ವಲಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ, ಬಿಸಿಎ ವಿಭಾಗದ ಮುಖ್ಯಸ್ಥ ಜನಾರ್ಧನ ರಾವ್ ಡಿ., IT-FORUMನ ಸಂಯೋಜಕಿ ಹಾಗೂ ಉಪನ್ಯಾಸಕಿ ಕು. ವಿಯೋಲ ಸೆರಾವೊ, ಎನಿಗ್ಮಾ-2024ರ ವಿದ್ಯಾರ್ಥಿ ಸಂಯೋಜಕ ಯುನಿತ್ ಕೆ ಮತ್ತು ರಾಬಿನ್ ಆಗಸ್ಟಿನ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಸುಧೀರ್ ಕೆ.ಎನ್ ರವರು ಕಂಪ್ಯೂಟರ್ ಅಪ್ಲಿಕೇಶನ್ ಪ್ರಪಂಚದ ಹೊಸ ಪ್ರವೃತ್ತಿಗಳ ಕುರಿತು ಮಾತನಾಡಿದರು ಮತ್ತು ಹೊಸ ತಾಂತ್ರಿಕ ಜಗತ್ತನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಉಪನ್ಯಾಸಕಿ ಕು. ಸ್ವೀಡಲ್ ರೋಡ್ರಿಗಸ್ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಎನಿಗ್ಮಾ-೨೦೨೪ಗೆ ನೀಡಿದ ಕೊಡುಗೆಗಳಿಗಾಗಿ ಮುಖ್ಯ ಅತಿಥಿಗಳಿಂದ ಗೌರವಿಸಲಾಯಿತು.

ದೀಕ್ಷಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಕು. ವಿಯೋಲ ಸೆರಾವೊ ಸ್ವಾಗತಿಸಿದರು. ರಾಬಿನ್ ಆಗಸ್ಟಿನ್ ವಂದಿಸಿದರು. ವಿದ್ಯಾರ್ಥಿಗಳಾದ ಹೀಬಾ ಮತ್ತು ಸೃಜನ್ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಕ್ಕಡ : ಅಸೌಖ್ಯದಿಂದ ವಿದ್ಯಾರ್ಥಿನಿ ಸಾವು

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜು: ಸಿ ಇ ಟಿ ಯಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya

ಮಲವಂತಿಗೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ವೆನಿಲಾ ಕೃಷಿ ಅನುಭವಿಯಾಗಿದ್ದ ಅಬ್ದುಲ್ಲ ಪಣಕಜೆ ನಿಧನ

Suddi Udaya

ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ

Suddi Udaya
error: Content is protected !!