September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಜೇಸಿಐ ಭಾರತ ವಿದ್ಯಾರ್ಥಿವೇತನ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕದ ಮೂಲಕ, ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ಪ್ರತಿಭಾವಂತ ವಿದ್ಯಾರ್ಥಿಗಳು ಜೇಸಿಐ ಇಂಡಿಯಾ ನೀಡುವ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಘಟಕದ ಅಧ್ಯಕ್ಷೆ ಜೇಸಿ ಎಚ್‌ಜಿಎಫ್ ಡಾ. ಶೋಭಾ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರಡಿಯಲ್ಲಿ, 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ದಿವ್ಯಶ್ರೀ ಜೇಸಿಐ ಭಾರತದ ಹೆಣ್ಣು ಮಕ್ಕಳ ಸಬಲೀಕರಣ ಯೋಜನೆಯಡಿ ಆಯ್ಕೆಯಾಗಿದ್ದು, ತಿಂಗಳಿಗೆ ರೂ. 1000/- ದಂತೆ 10 ತಿಂಗಳು, ಈಂತೆ 3 ವರ್ಷಗಳ ಕಾಲ ಒಟ್ಟು ರೂ. 30,000/- ವಿದ್ಯಾರ್ಥಿವೇತನ ಪಡೆಯಲಿದ್ದಾರೆ.


ಮತ್ತು 10ನೇ ತರಗತಿಯ ಮತ್ತಿಬ್ಬರು ವಿದ್ಯಾರ್ಥಿನಿಯರಾದ ಕುಮಾರಿ ಕುಶಣ್ಯಾ ಹಾಗೂ ಕುಮಾರಿ ಸವಿತಾ ಅವರು ತಲಾ ರೂ. 3000/- ರ ಒಂದು ಬಾರಿ ವಿದ್ಯಾರ್ಥಿವೇತನಕ್ಕಾಗಿ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೀನಾ ಎಸ್, ಎಲ್ಲಾ ಜೇಸಿಐ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದರು.

Related posts

ನದಿಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಸಾವು

Suddi Udaya

ಮರದಿಂದ ಬಿದ್ದು ಸಾವು

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಹೆಗ್ಗಡೆ ಭಾಗಿ

Suddi Udaya

ವಿ.ಪ. ಮಾಜಿ ಶಾಸಕ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ.50 ಲಕ್ಷ ಅನುದಾನದಿಂದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ

Suddi Udaya

ಯೋಗಾಸನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಮೋಹಿತ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ರಾ. ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya
error: Content is protected !!