24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಲಾಯಿಲ: ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್. ಸೇವಾ ನಿವೃತ್ತಿ

ಲಾಯಿಲ: ಲಾಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ವರಿ ಬಿ.ಎಸ್ ಎ.30ರಂದು ಸೇವಾ ನಿವೃತ್ತಿ ಹೊಂದಿದರು.

ಇವರು ಬಾಜಿಮಾರು ನಿವೃತ್ತ ಮುಖ್ಯ ಶಿಕ್ಷಕ ಸೇಸಪ್ಪ ಗೌಡ ಮತ್ತು ವಸುಮತಿ ದಂಪತಿ ಪುತ್ರಿ.ಬದನಾಜೆ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ಶಿಕ್ಷಣ ಮುಗಿಸಿ 1985ರಿಂದ 1998ರ ವರೆಗೆ ಬದನಾಜೆ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿದು ತಾಲೂಕಿನಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಯನ್ನು ಪಡೆದು ನಂತರ, 1998ರಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸರಕಾರಿ ಉನ್ನತೀಕರಿಸಿದ ಶಾಲೆ ಕೊಯ್ಯೂರು ಕಸಬಾದಲ್ಲಿ ಪ್ರಾರಂಭಿಸಿ ಸ್ಕೌಡ್-ಗೈಡ್ಸ್ನಲ್ಲಿ ಹಿಮಾಲಯ ಉಡುಬ್ಯಾಜ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಬಳಿಕ ಲಾಯಿಲ ಪಡ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಎ.30ರಂದು ಸೇವಾ ನಿವೃತ್ತ ಹೊಂದಿರುತ್ತಾರೆ. ೧೯೮೪-೮೫ನೇ ಎರಡು ವರ್ಷದಲ್ಲಿ ಮಹಿಳಾ ಯಕ್ಷಗಾನದಲ್ಲಿ ಭಾಗವಹಿಸಿ ಅನೇಕ ಕಡೆ ಪ್ರದರ್ಶನ, ಗಮಕ, ನೃತ್ಯ, ರಂಗಕಲೆ, ನಾಟಕಗಳಲ್ಲಿ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಂಡವರು.

Related posts

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ರೆಡ್ ಕ್ರಾಸ್ ಘಟಕ ಹಾಗೂ ಅತ್ಯುತ್ತಮ ರೆಡ್ ಕ್ರಾಸ್ ಜೂನಿಯರ್ ಕೌನ್ಸಿಲರ್ ಪ್ರಶಸ್ತಿ

Suddi Udaya

ವೇಣೂರು ದ್ವಿಚಕ್ರ ವಾಹನಗಳ ಹೋಂಡಾ ಶೋರೂಮ್ ಉದ್ಘಾಟನೆ

Suddi Udaya

ಧಮ೯ಸ್ಥಳ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಾರ್ಷಿಕೋತ್ಸವ

Suddi Udaya

ಫೆ.8: ಬೆನಕ ಆಸ್ಪತ್ರೆಯಿಂದ ಪಡಂಗಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಸುಲ್ಕೇರಿಮೊಗ್ರು ಸ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ: ನೂತನ ಸಮಿತಿ ರಚನೆ

Suddi Udaya
error: Content is protected !!