ಬೆಳ್ತಂಗಡಿ: ಚುನಾವಣಾ ನೀತಿ ಸಂಹಿತೆ ಘೋಷಣೆ ಬಳಿಕ ಬೆಳ್ತಂಗಡಿ ವಲಯ ಅಬಕಾರಿ ದಳದ ಇನ್ಸೆಕ್ಟರ್ ಲಕ್ಷ್ಮಣ್ ಉಪ್ಪಾರ ನೇತೃತ್ವದಲ್ಲಿ ತಾಲೂಕಿನಲ್ಲಿ ಒಟ್ಟು 144 ಅಕ್ರಮ ಮದ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 16 ರಂದು ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದು ಆ ಬಳಿಕ ಎಪ್ರಿಲ್ 28 ರವರೆಗೆ ತಾಲೂಕಿನಲ್ಲಿ ಅಕ್ರಮ ಮಧ್ಯ ಸಾಗಾಟ, ಮಧ್ಯ ಮಾರಾಟ, ಮಧ್ಯ ದಾಸ್ತಾನು ಸೇರಿದಂತೆ ಬೆಳ್ತಂಗಡಿ ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 144 ಪ್ರಕರಣವನ್ನು ದಾಖಲಿಸಿಕೊಂಡು 816.02 ಲೀಟರ್ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡು. ಇದರಲ್ಲಿ ಎರಡು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ ರೂಪಾಯಿ 4,45,539 ಆಗಿದೆ.
ಕಾರ್ಯಾಚರಣೆ: 144 ಪ್ರಕರಣದಲ್ಲಿ ಮಂಗಳೂರು ಡಿಸಿ ವಿಶೇಷ ಪತ್ತೆ ದಳದ ಅಧಿಕಾರಿಗಳು 8 ಪ್ರಕರಣ ಪತ್ತೆ ಹಚ್ಚಿದ್ದು. ಬಂಟ್ವಾಳ ಉಪವಿಭಾಗ ಮತ್ತು ಬೆಳ್ತಂಗಡಿ ವಲಯ ಅಬಕಾರಿ ದಳದ ಒಂಟಿ ಕಾರ್ಯಾಚರಣೆಯಲ್ಲಿ 12 ಪ್ರಕರಣ ಪತ್ತೆ ಹಚ್ಚಿದ್ದಾರೆ. ಉಳಿದ ಪ್ರಕರಣಗಳನ್ನು ಬೆಳ್ತಂಗಡಿ ವಲಯ ಅಬಕಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.